ನವದೆಹಲಿ, ಫೆ. 23– ರೈಲ್ವೆ ಪ್ರಯಾಣದ ದರವನ್ನು ಏಪ್ರಿಲ್ 1ನೇ ತಾರೀಖಿನಿಂದ ಹೆಚ್ಚಿಸುವುದಾಗಿ ರೈಲ್ವೆ ಸಚಿವ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ಯರು ಇಂದು ಪ್ರಕಟಿಸಿದರು.
ಪಾರ್ಲಿಮೆಂಟಿನಲ್ಲಿ 51–52ರ ರೈಲ್ವೆ ಆಯವ್ಯಯ ಅಂದಾಜನ್ನು ಮಂಡಿಸುತ್ತ ಈ ದರಗಳ ಏರಿಕೆಯಿಂದ ಹತ್ತೊಂಬತ್ತು ಕೋಟಿ ರೂ.ಗಳನ್ನು ಪಡೆಯಬಹುದೆಂಬ ಭರವಸೆ ವ್ಯಕ್ತಪಡಿಸಿದರು. ಮಾಲು ಸಾರಿಗೆ ದರವನ್ನು ಏರಿಸುವುದಿಲ್ಲ ಎಂದರು.
ಮೂರನೇ ತರಗತಿ ದರವನ್ನು ಮೈಲಿಗೆ 1 ಕಾಸಿನಂತೆ ಹೆಚ್ಚಿಸಿರುವು ದರಿಂದ ಪ್ಯಾಸೆಂಜರ್ ದರ 4 ಕಾಸಿ ನಿಂದ 5 ಕಾಸು, ಎಕ್ಸ್‌ಪ್ರೆಸ್ ದರ 5 ಕಾಸಿನಿಂದ 6 ಕಾಸಿಗೂ ಏರುವುದು.
ಇಂಟರ್ ತರಗತಿ ದರವನ್ನು ಮೈಲಿಗೆ 1 ಕಾಸಿನಂತೆ ಹೆಚ್ಚಿಸಿರುವುದ ರಿಂದ ಪ್ಯಾಸೆಂಜರ್ ದರ 7 ಕಾಸಿನಿಂದ 9 ಕಾಸಿಗೂ, ಎಕ್ಸ್‌ಪ್ರೆಸ್ ದರ 9 ಕಾಸಿ ನಿಂದ 10 ಕಾಸಿಗೂ, ದ್ವಿತೀಯ ತರಗತಿ ದರ 14 ಕಾಸಿನಿಂದ 16 ಕಾಸು, ಪ್ರಥಮ ತರಗತಿ ದರ ಮೈಲಿಗೆ 24 ಕಾಸುಗಳಿಂದ 27 ಕಾಸಿಗೆ ಏರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.