ADVERTISEMENT

25 ವರ್ಷಗಳ ಹಿಂದೆ: ವೀರಪ್ಪನ್‌ ಬಳಿ ಸಂಧಾನಕ್ಕೆ ತೆರಳಿದ ಗೋಪಾಲ್‌

ಪ್ರಜಾವಾಣಿ ವಿಶೇಷ
Published 1 ಆಗಸ್ಟ್ 2025, 23:41 IST
Last Updated 1 ಆಗಸ್ಟ್ 2025, 23:41 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ವೀರಪ್ಪನ್‌ ಬಳಿ ಸಂಧಾನಕ್ಕೆ ತೆರಳಿದ ಗೋಪಾಲ್‌

ಚೆನ್ನೈ, ಆಗಸ್ಟ್‌ 1 (ಯುಎನ್‌ಐ, ಪಿಟಿಐ)– ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರ ಬಿಡುಗಡೆಗೆ ವೀರಪ್ಪನ್‌ ಜತೆ ಸಂಧಾನ ನಡೆಸಲು ‘ನಕ್ಕೀರನ್‌’ ಸಂಪಾದಕ ಗೋಪಾಲ್‌ ಇಂದು ಸಂಜೆ ಕಾಡಿಗೆ ತೆರಳಿದರು.

ಗೋಪಾಲ್‌ ಅವರು, ತಮ್ಮನ್ನು ಭೇಟಿ ಮಾಡಿದ ನಂತರ ಕಾಡಿಗೆ ತೆರಳಿದರು ಎಂದು ಹೆಚ್ಚುವರಿ ಡಿಜಿಪಿ ಎ.ಎಕ್ಸ್‌. ಅಲೆಕ್ಸಾಂಡರ್‌ ಅವರು ತಿಳಿಸಿದ್ದಾರೆ. ಗೋಪಾಲ್‌ ಅವರು, ಸಂಧಾನಕ್ಕೆ ಕಾಡಿಗೆ ತೆರಳುವುದನ್ನು ಅವರು ಕರ್ನಾಟಕ ಸರ್ಕಾರಕ್ಕೂ ತಿಳಿಸಿದ್ದಾರೆ. ನಾಳೆಯೇ ಗೋಪಾಲ್‌ ಅವರು, ವೀರಪ್ಪನ್‌ ಭೇಟಿ ಮಾಡಲಿದ್ದಾರೆ.

ಕಾಶ್ಮೀರ: 24 ಮಂದಿ ಸಾಮೂಹಿಕ ಹತ್ಯೆ

ಶ್ರೀನಗರ, ಆಗಸ್ಟ್ 1 (ಯುಎನ್‌ಐ)– ಹಿಜಬುಲ್‌ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ‘ಕದನ ವಿರಾಮ’ ಘೋಷಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಇಂದು ನಡೆದ ಹಿಂಸೆಯಲ್ಲಿ 11 ಮಂದಿ ಅಮರನಾಥ ಯಾತ್ರಿಗಳು ಸೇರಿದಂತೆ 24 ಮಂದಿ ಸತ್ತಿದ್ದಾರೆ. ಪಹಲ್ಗಾಮ್‌ನ ಆರ‍್ದೂ ಸೇತುವೆ ಬಳಿ ಉಗ್ರಗಾಮಿಗಳ ಒಂದು ಗುಂಪು ಊಟ ಮಾಡುತ್ತಿದ್ದ ಯಾತ್ರಾರ್ಥಿಗಳ ಮೇಲೆ ಮನಸೇಚ್ಛೆ ಗುಂಡು ಹಾರಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.