ADVERTISEMENT

25 ವರ್ಷಗಳ ಹಿಂದೆ | ರೌಡಿ ತಂಗಂ ಸಹೋದರರ ದಾಂಧಲೆ: ವ್ಯಕ್ತಿಯ ಸಾವು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಕೆಜಿಎಫ್‌, ಅ. 28– ಕುಖ್ಯಾತ ರೌಡಿ ತಂಗಂನ ಸಹೋದರರು ನಿನ್ನೆ ರಾತ್ರಿಯಿಂದ ಇಂದು ಮಧ್ಯಾಹ್ನದವರೆವಿಗೆ ನಡೆಸಿದ ಹಲ್ಲೆ ಹಾಗೂ ದಾಂಧಲೆಗಳಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈ ಸಂಬಂಧ ಇಂದು ಇಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿದೆ.

ಇತ್ತೀಚೆಗೆ ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿ ತಂಗಂನ ತಾಯಿ ಪವಳಿ ಮೇಲೆ ವಿರೋಧಿ ಗುಂಪೊಂದು ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿತ್ತು. ತಾಯಿ ಮೇಲೆ ನಡೆದ ಹಲ್ಲೆಗೆ ಪ್ರತೀಕಾರವಾಗಿ ದಾಂಧಲೆ ನಡೆಸಿದ್ದಾರೆ.