
ಪ್ರಜಾವಾಣಿ ವಾರ್ತೆಅಹಮದಾಬಾದ್, ನ.1– ‘ಕೈಗಾರಿಕೋದ್ಯಮಿಗಳು ಮತ್ತು ವರ್ತಕರು ಕಾಲಗತಿಯ ಸೂಚನೆಯೇನೆಂಬುದನ್ನು ಸರಿಯಾಗಿ ಅರಿತು ರಾಷ್ಟ್ರೋನ್ನತಿ ಸಾಧನೆಗಾಗಿ ಶ್ರಮಿಸಬೇಕು’ ಹೀಗೆಂದು ಉಪಮಹಾಪ್ರಧಾನಿ ಸರ್ದಾರ್ ಪಟೇಲರು ಅಹಮದಾಬಾದಿನ ಗಿರಣಿ ಮಾಲೀಕರ ಮತ್ತು ಗುಜರಾತಿನ ವಾಣಿಜ್ಯ ಸಂಘದವರು ಇಂದು ಸಂಜೆ ತಮಗಿತ್ತ ಸತ್ಕಾರವೊಂದರ ಸಮಯದಲ್ಲಿ ಭಾಷಣ ಮಾಡುತ್ತಾ ತಿಳಿಸಿದರು.
ಮುಂದುವರಿದು ‘ಅಪರಿಮಿತ ತ್ಯಾಗ, ಕಷ್ಟಗಳಿಂದ ಗಳಿಸಿರುವ ಸ್ವಾತಂತ್ರ್ಯ ವನ್ನು ಸುಭದ್ರಗೊಳಿಸುವುದೇ ನಮ್ಮೆಲ್ಲರ ಏಕ ಮಾತ್ರ ಗುರಿ’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.