ADVERTISEMENT

75 ವರ್ಷಗಳ ಹಿಂದೆ|ಸಂಸ್ಥಾನದ ಅಸ್ತಿತ್ವಕ್ಕೆ ಅಪಾಯ: ಕಾಶ್ಮೀರ ಪ್ರಧಾನಿ ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
   

ನವದೆಹಲಿ, ಫೆ. 25– ಕಾಶ್ಮೀರ ಸಮಸ್ಯೆಯ ಬಗ್ಗೆ ಈಗ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮುಂದೆ ಇರುವ ಬ್ರಿಟನ್ ಮತ್ತು ಅಮೆರಿಕಾಗಳ ಕರಡು ನಿರ್ಣಯವನ್ನು ಕುರಿತು, ಜಮ್ಮು ಮತ್ತು ಕಾಶ್ಮೀರ ಸಂಸ್ಥಾನಗಳ ಪ್ರಧಾನಿ ಷೇಕ್ ಅಬ್ದುಲ್ಲಾ ಸಂಪೂರ್ಣ ನಿರಾಶೆ ವ್ಯಕ್ತಪಡಿಸಿದ್ದು, ‘ರಾಷ್ಟ್ರದ ಭವಿಷ್ಯ ನಿರ್ಧಾರ ಜನತೆಗೆ ಸೇರಿದ್ದು’ ಎಂದು ಹೇಳಿದ್ದಾರೆ.

ಓವನ್ ಡಿಕ್ಸನರ ಸಲಹೆಗಳು, ಕಾಮನ್ವೆಲ್ತ್ ಪ್ರಧಾನಿಗಳ ಮಾತುಕತೆಗಳು ಮತ್ತು ಈಚಿನ ಬ್ರಿಟನ್ ಮತ್ತು
ಅಮೆರಿಕಾಗಳ ನಿರ್ಣಯ, ಇವೆಲ್ಲವುಗಳಿಂದ ರಾಷ್ಟ್ರದ ಭದ್ರತೆಗೆ ಧಕ್ಕೆ ಬರುವುದು, ವಿಭಜನೆಯ ಮೂಲಕ
ದೇಶ ಹೋಳಾಗುವುದು, ಸರ್ಕಾರದ ಸಾರ್ವಭೌಮತ್ವವನ್ನು ನಿರ್ಬಂಧಿಸಿದಂತಾಗುವುದು ಎಂದು ಕಾಶ್ಮೀರ ಪ್ರಧಾನಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT