ADVERTISEMENT

75 ವರ್ಷಗಳ ಹಿಂದೆ: ಪಾರ್ಲಿಮೆಂಟಿನಲ್ಲಿ ಹಿಂದೂ ಕೋಡ್ ಬಿಲ್ ಪರಿಶೀಲನೆ

1951ರ ಫೆಬ್ರುವರಿ 7, ಬುಧವಾರ

ಪ್ರಜಾವಾಣಿ ವಿಶೇಷ
Published 7 ಫೆಬ್ರುವರಿ 2026, 0:12 IST
Last Updated 7 ಫೆಬ್ರುವರಿ 2026, 0:12 IST
   

ಪಾರ್ಲಿಮೆಂಟಿನಲ್ಲಿ ಹಿಂದೂ ಕೋಡ್ ಬಿಲ್ ಪರಿಶೀಲನೆ

ನವದೆಹಲಿ, ಫೆ. 6– ಆರು ವಾರಗಳ ಅಂತರದ ಬಳಿಕ ಇಂದು ಪಾರ್ಲಿಮೆಂಟ್ ಮತ್ತೆ ಸೇರಿದಾಗ ವಿವಾದಾಸ್ಪದ ಹಿಂದೂ ಕೋಡ್ ಮಸೂದೆಯ ಒಂದೊಂದು ವಿಧಿ ಯನ್ನೂ ಪರಿಶೀಲಿಸಲಾಯಿತು.

ವಿವಿಧ ವಿಧಿಗಳಿಗೆ 560 ತಿದ್ದುಪಡಿ ಗಳಿಗೆ ನೋಟಿಸ್‌ಗಳನ್ನು ಇದುವರೆಗೆ ಹಂಚಲಾಗಿದೆ.

ADVERTISEMENT

ಸಾವಕಾಶವಾಗಿ ಆದರೆ, ಉದ್ರೇಕ ಪೂರಿತವಾಗಿ ನಡೆದ ಈ ಚರ್ಚೆಯಲ್ಲಿ ಮಾತನಾಡಿದವರಲ್ಲಿ ಮಧ್ಯಭಾರತದ ವಿ.ಎಸ್‌. ಸಾರವಾಟಿಯವರು ಈ ಮಸೂದೆಯನ್ನು ಹಿಂದೂಗಳಿಗೆ ಮಾತ್ರವಲ್ಲದೆ, ಹಿಂದೂಗಳಲ್ಲದ ವರಿಗೂ ಅನ್ವಯಿಸಬೇಕೆಂದರು.

ಬಿಹಾರದ ಬಿ.ಪಿ. ಜುಂಜುನ್‌ ವಾಲಾ ಮತ್ತು ಪಶ್ಚಿಮ ಬಂಗಾಳದ ನಾಜಿರುದ್ದೀನರು ಈ ಉದ್ದೇಶಕ್ಕಾಗಿ ದಾಖಲೆ ಮಾಡಿಕೊಂಡಿರುವವರಿಗೆ ಮಾತ್ರ ಈ ಮಸೂದೆಯನ್ನು ಅನ್ವಯಿಸಬೇಕೆಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.