ADVERTISEMENT

ಪಾರ್ಕಿಂಗ್ ತೆರವುಗೊಳಿಸಿ

ಸಿದ್ದು
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಪ್ರತಿನಿತ್ಯ ಲಾಲ್‌ಬಾಗ್‌ಗೆ ವಾಕಿಂಗ್‌ಗೆಂದು ಬರುವವರ ಸಂಖ್ಯೆ ಹೆಚ್ಚುತ್ತಿದೆ. ಬರುವವರು ತಮ್ಮ ವಾಹನಗಳನ್ನು ಲಾಲ್‌ಬಾಗ್ ಮುಖ್ಯದ್ವಾರ, ಪ್ರವೇಶದ್ವಾರಗಳ ಅಷ್ಟೂ ರಸ್ತೆಗಳಲ್ಲಿ ಪಾರ್ಕ್ ಮಾಡುತ್ತಾರೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ.

ಇಲ್ಲಿ ಪಾರ್ಕಿಂಗ್ ಸ್ಥಳಗಳೆಂದು ಸಂಚಾರಿ ಪೊಲೀಸ್ ಗುರುತಿಸಿಲ್ಲ. ನಾಗರಿಕರೆನಿಸಿಕೊಂಡ ಮಂದಿಯೇ ಹೊರಡುವಾಗ ವಾಹನ ತೆಗೆಯುವ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳ ಚಾಲಕರು, ಬಿಎಂಟಿಸಿ ಬಸ್‌ಗಳ ಚಾಲಕರೊಡನೆ ಅನುಚಿತವಾಗಿ ವರ್ತಿಸುವುದು ಸರಿಯಲ್ಲ.

ಸಂಬಂಧಪಟ್ಟ ಸಂಚಾರ ಪೊಲೀಸ್ ಠಾಣೆಯವರು ಇತ್ತ ಗಮನಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.