ADVERTISEMENT

ಹೋಮ ಹವನಗಳಲ್ಲಿ ದೇವರಿಲ್ಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿ ಹೋಮ ಹವನ ನಡೆಸಿದ ವರದಿಗಳು ಪ್ರಕಟವಾಗಿವೆ. ಇವು ಅವರಿಗೆ ಶೋಭೆ ತರಲಾರವು.  ತಮಗೆ ಒದಗಿ ಬರಬಹುದಾದ ಎಲ್ಲ ಅನಿಷ್ಟಗಳನ್ನು ಪರಿಹರಿಸಲಿಕ್ಕಾಗಿ, ಅಧಿಕಾರದ ರಕ್ಷಣೆಗಾಗಿ ಹಿಂದಿನವರು ಹೋಮ, ಅತಿ ರುದ್ರಯಾಗ, ಶತರುದ್ರಯಾಗ, ಸಹಸ್ರ ಚಂಡಿಯಾಗ, ಶತ್ರು ಸಂಹಾರ ಯಾಗ ಮುಂತಾದ ನೂರೆಂಟು ಯಾಗಗಳನ್ನು ನಡೆಸಿದರೂ ಕುರ್ಚಿ ಕಳೆದು ಕೊಳ್ಳುವುದನ್ನು ತಪ್ಪಿಸಲಾಗಲಿಲ್ಲ.

ಅಗ್ರಹಾರಕ್ಕೆ ಎಡತಾಕುವುದನ್ನು ನಿಲ್ಲಿಸಲಾಗಲಿಲ್ಲ. ಇಂಥ ಆಚರಣೆಗಳು ಅವರವರ ವೈಯಕ್ತಿಕ ವಿಷಯಗಳಾಗಿದ್ದರೂ ದೊಡ್ಡವರೆನಿಸಿಕೊಳ್ಳುವವರು ದೊಡ್ಡ ದೊಡ್ಡ ಸ್ಥಾನದಲ್ಲಿರುವವರು ಇತರರಿಗೆ ಮಾದರಿಯಾಗಿ ಇರಬೇಕಾಗುತ್ತದೆ.

ಹೋಮ ಹವನ ಮೊದಲಾದ ಡಾಂಭಿಕ ಆಚರಣೆಗಳಲ್ಲಿ ದೇವರನ್ನು ಹುಡುಕದೇ ಮಣ್ಣಿನಲ್ಲಿ ಮಣ್ಣಾಗಿ ದಿನವಿಡೀ ದುಡಿದು ದೇಶಕ್ಕೆ ಅನ್ನ ನೀಡುವ ರೈತನಲ್ಲಿ, ದೇಶದ ಗಡಿ ಕಾಯುವ ಜವಾನನಲ್ಲಿ, ಗಿರಣಿಗಳಲ್ಲಿ ದುಡಿಯುವ ಕಾರ್ಮಿಕನಲ್ಲಿ, ರಸ್ತೆ, ಕೆರೆ, ಕಾಲುವೆ, ಅಣೆಕಟ್ಟು ಕಟ್ಟುವ ಕೂಲಿಕಾರನಲ್ಲಿ ದೇವರನ್ನು ಕಾಣಬೇಕು. ಅಂಥವರ ಕಲ್ಯಾಣಕ್ಕೆ ಏನಾದರೂ ಪ್ರಾಮಾಣಿಕ ಕ್ರಮ ಕೈಗೊಂಡರೆ ದೇವರು ಒಲಿಯುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.