ADVERTISEMENT

ವಾಚಕರ ವಾಣಿ: ವಿದೇಶ ಪ್ರವಾಸದ ಕೊಡುಗೆ ಸಲ್ಲ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 19:30 IST
Last Updated 6 ನವೆಂಬರ್ 2022, 19:30 IST

ಬಿಬಿಎಂಪಿ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದರೆ, ಆಯಾ ಶಾಲೆಯ ಮುಖ್ಯ ಶಿಕ್ಷಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 4). ಬಿಬಿಎಂಪಿ ಶಾಲೆಗಳ ಶಿಕ್ಷಕರಿಗೆ ಉತ್ತಮ ಸಂಬಳ ಕೊಡಲಾಗುತ್ತದೆ. ಪದೋನ್ನತಿ ದೊರೆಯುತ್ತದೆ. ವಿವಿಧ ರೀತಿಯ ರಜಾ ಸೌಲಭ್ಯಗಳಿವೆ. ವೈದ್ಯಕೀಯ ವೆಚ್ಚ ಮರುಪಾವತಿಗೂ ಅವಕಾಶವಿದೆ. ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯವಿದೆ.

ಇಷ್ಟೆಲ್ಲಾ ಸೌಲಭ್ಯಗಳನ್ನು ಪಡೆಯುವ ಶಿಕ್ಷಕರ ಆದ್ಯ ಕರ್ತವ್ಯ ಉತ್ತಮ ಫಲಿತಾಂಶ ಕೊಡುವುದೇ ಆಗಿರುತ್ತದೆ. ಹೀಗಾಗಿ, ಅಂತಹ ಮುಖ್ಯ ಶಿಕ್ಷಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವ ಆಲೋಚನೆಯನ್ನು ಕೈಬಿಡಬೇಕು. ಉತ್ತಮ ಫಲಿತಾಂಶ ಕೊಡುವವರನ್ನು ಸೇವೆಯಲ್ಲಿ ಮುಂದುವರಿಸುವ ಭರವಸೆಯನ್ನೂ, ಕೊಡದವರನ್ನು ಮನೆಗೆ ಕಳುಹಿಸುವ ಶಿಕ್ಷೆಯನ್ನೂ ಜಾರಿಗೊಳಿಸಬೇಕು. ಆಗ ಶಾಲೆಯ ಫಲಿತಾಂಶ ತನ್ನಿಂತಾನೇ ಸುಧಾರಿಸುತ್ತದೆ. ಜೊತೆಗೆ, ಸರ್ಕಾರವು ಶಾಲೆಗಳಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬೇಕೇ ವಿನಾ ಶೇ 100ರಷ್ಟು ಗುರಿ ಸಾಧಿಸಬೇಕೆಂದು ಒತ್ತಡ ಹಾಕು ವುದು ಕಾರ್ಯಸಾಧುವಲ್ಲ.

-ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.