ADVERTISEMENT

ಪದಾರ್ಥಗಳ ಬೆಲೆ ಏರಿಕೆ ಸಲ್ಲ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:00 IST
Last Updated 29 ಮಾರ್ಚ್ 2020, 20:00 IST

ಕೊರೊನಾಗೆ ಸಂಬಂಧಿಸಿದ ದಿಗ್ಬಂಧನದಿಂದಾಗಿ, ದಿನಸಿ ಮತ್ತಿತರ ಪದಾರ್ಥಗಳ ಸಾಗಣೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡು ಸ್ವಲ್ಪಮಟ್ಟಿನ ಕೊರತೆ ಉಂಟಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದು ಖಂಡಿತ ಸಹಜ ಸ್ಥಿತಿಗೆ ಮರಳುವುದರಲ್ಲಿ ಅನುಮಾನ ಇಲ್ಲ. ಆದರೆ ಈ ಸಣ್ಣ ಕೊರತೆಯ ಕಾರಣ ಮುಂದಿಟ್ಟುಕೊಂಡು, ವರ್ತಕರು ಪದಾರ್ಥಗಳ ಬೆಲೆ ಏರಿಸುವುದು ಸರಿಯಲ್ಲ.

ನಾನೂ ದಿನಸಿ ಮಾರುವ ಒಬ್ಬ ವರ್ತಕ. ನಮಗೆ ದಿನಸಿ ಪೂರೈಸುವ ಸಗಟು ವರ್ತಕರು ಪದಾರ್ಥಗಳ ಬೆಲೆಗಳನ್ನು ಏರಿಸಬಾರದು. ಅವುಗಳನ್ನು ಎಂದಿನಂತೆ ಪೂರೈಸಿ, ಸಾಧ್ಯವಾದರೆ ಕಡಿಮೆ ಲಾಭ ಇಟ್ಟು ಮಾರಾಟ ಮಾಡಬೇಕು. ಕೆಲಸವಿಲ್ಲದೆ, ಖರ್ಚಿಗೆ ಕಾಸಿಲ್ಲದೆ ಕಷ್ಟದಲ್ಲಿ ದಿನದೂಡುತ್ತಿರುವ ಬಡವರ ಗಾಯದ ಮೇಲೆ ಬರೆ ಎಳೆಯುವ ಪ್ರಯತ್ನವನ್ನು ಯಾರೂ ಮಾಡಬಾರದು.

-ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.