ADVERTISEMENT

ಕಸ ವಿಲೇವಾರಿ: ಮೂಡಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST

ಕಸ ವಿಲೇವಾರಿ ಪ್ರತೀ ಊರಿನ ಸಮಸ್ಯೆಯಾಗಿದೆ. ಯೂಸ್ ಅಂಡ್ ಥ್ರೋ ವಸ್ತುಗಳ ಬಳಕೆ ಅಧಿಕವಾಗಿದೆ. ಎಲ್ಲಾ ತಾಜ್ಯಗಳನ್ನು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಕಸದ ಗಾಡಿಗೆ ಎಸೆಯುವ ಜಾಯಮಾನ ಎಲ್ಲರದೂ ಆಗಿದೆ. ಕಸ ಗುಡಿಸಿ ಹಾಕುವುದೊಂದೇ ಸ್ವಚ್ಛತೆಯ ಲಕ್ಷಣವಲ್ಲ, ಕಸವನ್ನು ಸರಿಯಾಗಿ ವಿಂಗಡಿಸಿ ವಿಲೇವಾರಿ ಮಾಡುವುದು ಸಂಪೂರ್ಣ ಸ್ವಚ್ಛ ಪರಿಸರ ನಿರ್ಮಾಣದ ಜವಾಬ್ದಾರಿ ಎನ್ನುವ ಅರಿವು ನಾಗರಿಕರಲ್ಲಿ ಮೂಡಬೇಕಾಗಿದೆ.

ಪ್ರತಿದಿನ ಸಂಗ್ರಹಿಸುವ ಟನ್‌ಗಟ್ಟಲೆ ಕಸವನ್ನು ಹಸಿ ಕಸ, ಒಣ ಕಸವನ್ನಾಗಿ ವಿಂಗಡಣೆ ಮಾಡಲು ಪೌರ ಕಾರ್ಮಿಕರಿಂದ ಸಾಧ್ಯವಿಲ್ಲ. ಆ ರಾಶಿಯನ್ನು ಮರುಬಳಕೆ ಮಾಡಲು ತೋಚದೆ ಊರ ಹೊರಗೆ ಗುಡ್ಡೆ ಹಾಕುತ್ತಾರೆ. ನಾವು ಪ್ರತಿಯೊಬ್ಬರೂ ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಟ್ಟರೆ, ಗೊಬ್ಬರಕ್ಕೆ, ಮರುಬಳಕೆಗೆ ಮಾದರಿಯಾಗುವಂತಹ ನಾಡು ನಮ್ಮದಾಗುತ್ತದೆ.

ಮಂಜುನಾಥ್ ಜಿ.,ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.