ADVERTISEMENT

ಅಂಚೆ ಮತ ಗೋಪ್ಯವಾಗಿರಲಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:31 IST
Last Updated 28 ಡಿಸೆಂಬರ್ 2020, 19:31 IST

ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಇದೇ 30ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಕರ್ತವ್ಯನಿರತ ಸರ್ಕಾರಿ ನೌಕರರು ತಮ್ಮ ಗ್ರಾಮಗಳ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಮತವನ್ನು ಹಾಕಿದ್ದಾರೆ. ಕೆಲವು ಗ್ರಾಮಗಳಲ್ಲಿ ಒಬ್ಬರೋ ಇಬ್ಬರೋ ಸರ್ಕಾರಿ ನೌಕರರು ಇರುತ್ತಾರೆ. ಮತ ಎಣಿಕೆ ದಿನದಂದು ಚುನಾವಣಾ ಸಿಬ್ಬಂದಿಯು ಇವರು ಯಾರಿಗೆ ಅಂಚೆ ಮತವನ್ನು ಹಾಕಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತಾರೆ. ಇದರಿಂದ, ಸೋತ ಅಭ್ಯರ್ಥಿಗಳು ಈ ನೌಕರರ ವಿರುದ್ಧ ಕುಪಿತರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಚುನಾವಣಾ ಆಯೋಗವು ಇಂತಹ ಊರುಗಳ ಮತಗಟ್ಟೆಗಳಲ್ಲಿ ಸರ್ಕಾರಿ ನೌಕರರ ಮತ ಬಹಿರಂಗವಾಗದಂತೆ ಗೋಪ್ಯತೆ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಆಯೋಗ ತುರ್ತು ಕ್ರಮ ಕೈಗೊಳ್ಳಲಿ.

-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT