ADVERTISEMENT

ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿ

​ಪ್ರಜಾವಾಣಿ ವಾರ್ತೆ
Published 31 ಮೇ 2020, 20:00 IST
Last Updated 31 ಮೇ 2020, 20:00 IST

ವಲಸೆ ಕಾರ್ಮಿಕರ ಸ್ಥಿತಿಗತಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಈ ಪ್ರಕರಣದ ವಿಚಾರಣೆಯ ಕಾಲದಲ್ಲಿ ಸಾಲಿಸಿಟರ್ ಜನರಲ್ ಅವರು ದೇಶದ ಕೆಲವು ಹೈಕೋರ್ಟ್‌ಗಳು ವಲಸೆ ಕಾರ್ಮಿಕರ ವಿಚಾರದಲ್ಲಿ ನೀಡಿದ ಆದೇಶಗಳನ್ನು ಉಲ್ಲೇಖಿಸುತ್ತಾ, ಕೆಲವು ಹೈಕೋರ್ಟ್‌ಗಳು ಪರ್ಯಾಯ ಸರ್ಕಾರಗಳನ್ನು ನಡೆಸುತ್ತಿವೆ ಎಂದಿದ್ದಾರೆ; ಅಲ್ಲದೆ, ವಲಸಿಗರ ಬವಣೆಗಳ ಬೆನ್ನು ಹತ್ತಿ ವರದಿ ಮಾಡುತ್ತಿರುವ ವರದಿಗಾರರನ್ನು ಗಿಡುಗಗಳೆಂದು ಕರೆದಿದ್ದಾರೆ ಎಂದು ವರದಿಯಾಗಿದೆ.

ಗಂಭೀರ ತೊಡಕುಗಳ ನಡುವೆಯೂ ಪ್ರಜಾಪ್ರಭುತ್ವದ ಆಶಯಗಳಿಗಾಗಿ ಕಾದಾಡುವ ವರದಿಗಾರರ ಕುರಿತು ತುಚ್ಛ ಮಾತುಗಳನ್ನಾಡುವುದು ಒಳ್ಳೆಯ ಅಭಿರುಚಿಯಲ್ಲ. ಯಾವುದೇ ಹೈಕೋರ್ಟ್‌ಗಳ ಆದೇಶಗಳು ಸರಿಯಿಲ್ಲವೆಂದರೆ ಅಂತಹ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಪ್ರಶ್ನಿಸಬೇಕಾದದ್ದು ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ ಅವರ ಕೆಲಸ. ಇದನ್ನು ಬಿಟ್ಟು, ಮನಸ್ಸಿಗೆ ಬಂದಂತೆ ಹೇಳುವುದು ನ್ಯಾಯಾಂಗ ನಿಂದನೆಯ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುತ್ತದೆ.

–ಕೆ.ಬಿ.ಕೆ.ಸ್ವಾಮಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.