ADVERTISEMENT

ಮುಗಿಯದ ರಜೆ, ಕಾಣದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಮೇ 2020, 20:00 IST
Last Updated 31 ಮೇ 2020, 20:00 IST

ಜೂನ್ ಮೊದಲ ದಿನ ಬಂತೆಂದರೆ ಮಕ್ಕಳಲ್ಲಿ ಶಾಲೆಗೆ ಹೊರಡುವ ತವಕ. ರಜೆಯ ಗುಂಗಿನಲ್ಲಿದ್ದ ಮಕ್ಕಳ ಬ್ಯಾಗ್, ಪುಸ್ತಕಗಳನ್ನು ಹುಡುಕಿ ಅವರನ್ನು ಶಾಲೆಗೆ ಕಳುಹಿಸುವ ಆತುರ ಪೋಷಕರಿಗೆ. ಇನ್ನು ದೂಳು, ಕಸಮಯವಾಗಿದ್ದ ಶಾಲೆಯನ್ನು ಸಿಂಗರಿಸಿ, ಮಕ್ಕಳನ್ನು ಶಾಲೆಗೆ ಆಹ್ವಾನಿಸಲು ಶಿಕ್ಷಕರು ತುದಿಗಾಲ ಮೇಲೆ ನಿಲ್ಲುತ್ತಿದ್ದ ದಿನ.

ರಜೆಯ ಮಂಪರಿನಿಂದ ಎದ್ದು ಬಂದು, ಗೆಳೆಯರೊಂದಿಗೆ ಬೆರೆತು ಕಲಿಕೆಗೆ ಸಿದ್ಧವಾಗುತ್ತಿದ್ದ ವಿದ್ಯಾರ್ಥಿ ಸಮೂಹ. ಗೂಡು ಬಿಟ್ಟ ಹಕ್ಕಿಗಳು ಮರಳಿ ಗೂಡು ಸೇರಿ ಚಿಲಿಪಿಲಿಗುಡುವಾಗ, ಶಾಲೆಯಂಗಳದಲ್ಲಿ ಮಕ್ಕಳ ಜ್ಞಾನ ಕಲರವ. ಆದರೆ ಇಂತಹ ಸಂಭ್ರಮಕ್ಕೆ ಈ ಸಲ ಕುತ್ತು ಬಂದಿದೆ. ಎಲ್ಲ ಕೊರೊನಾಮಯವಾಗಿದೆ.

-ದೇವರಹಳ್ಳಿ ಲೋಕೇಶ್, ಪಾಂಡವಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.