ADVERTISEMENT

ವಾಚಕರ ವಾಣಿ: ಕೇಂದ್ರದ ನಡೆ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:30 IST
Last Updated 5 ಜೂನ್ 2022, 19:30 IST

ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಆಹಾರದ ಬಿಲ್ ಜೊತೆಗೆ ಸೇವಾ ಶುಲ್ಕವನ್ನು ಮನಬಂದಂತೆ ವಸೂಲಿ ಮಾಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸಚಿವ ಪೀಯೂಷ್‌ ಗೋಯಲ್ ಅವರು ಆಹಾರದ ಬಿಲ್‌ನೊಂದಿಗೆ ಸೇವಾ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ. ಜೊತೆಗೆ ಈ ಸಂಬಂಧ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ಇದು ಸ್ವಾಗತಾರ್ಹ ನಡೆ. ಇದರಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಲಿದೆ. ಹೋಟೆಲ್, ರೆಸ್ಟೊರೆಂಟ್‌ನ ಸೇವೆಯಿಂದ ತೃಪ್ತಿಯಾಗಿ ಗ್ರಾಹಕರೇ ಟಿಪ್ಸ್ ರೂಪದಲ್ಲಿ ಹಣ ನೀಡಿದರೆ ಸ್ವೀಕರಿಸಲು ಅನುಮತಿ ನೀಡಿರುವುದನ್ನು ಮಾಲೀಕರು ಗಮನಿಸಬೇಕು.

–ಚನ್ನಕೇಶವ ಜಿ.ಕೆ., ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT