ADVERTISEMENT

ಕ್ರೀಡಾ ಪ್ರತಿಭೆ ಗುರುತಿಸಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST

ಕಂಬಳ ಕ್ರೀಡೆಯು ಇತ್ತೀಚೆಗೆ ಬುಹು ಚರ್ಚಿತ ವಿಷಯವಾಗಿದೆ. ಕಂಬಳ ಕ್ರೀಡಾಪಟು ಶ್ರೀನಿವಾಸ ಗೌಡರಿಂದ ಹಿಡಿದು ಓಟಗಾರ ಉಸೇನ್ ಬೋಲ್ಟ್‌ ಅವರವರೆಗೂ ಹೋಲಿಕೆ, ಚರ್ಚೆಗಳು ನಡೆಯುತ್ತಿವೆ. ಶಾಸಕರಾಗಿದ್ದ ದಿವಂಗತ ಪುಟ್ಟಣ್ಣಯ್ಯ ಅವರು ಈ ಹಿಂದೆ ಸದನದಲ್ಲಿ ಮಾತನಾಡುತ್ತಾ, ಕಂಬಳದಲ್ಲಿ ಕೋಣಗಳೊಂದಿಗೆ ಓಡುವ ಹತ್ತು ಓಟಗಾರರನ್ನು ಸರ್ಕಾರ ಗುರುತಿಸಿ, ತರಬೇತಿ ನೀಡಿದ್ದೇ ಆದರೆ, ಒಲಿಂಪಿಕ್ಸ್‌ನಲ್ಲಿ ಕನಿಷ್ಠ ಏಳೆಂಟು ಸ್ವರ್ಣ ಪದಕಗಳನ್ನು ಗೆಲ್ಲುವುದು ಅಸಾಧ್ಯವೇನಲ್ಲ. ಸರ್ಕಾರ ಇತ್ತ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದ್ದರು.

ಹಾಸ್ಯಮಿಶ್ರಿತ ಧಾಟಿಯಲ್ಲಿದ್ದ ಅವರ ಈ ಮಾತನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದು ಅವರ ಮಾತುಗಳು ಎಷ್ಟು ದೂರದೃಷ್ಟಿ ಹೊಂದಿದ್ದವು, ಅವರ ಆಲೋಚನಾಲಹರಿ ಎಷ್ಟು ವಿಸ್ತಾರವಾಗಿತ್ತು ಎಂಬುದು ತಿಳಿಯುತ್ತದೆ. ಎಲೆಮರೆಯ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳನ್ನು ಇನ್ನಾದರೂ ಸರ್ಕಾರ ಗುರುತಿಸಿ ತರಬೇತಿ ನೀಡಲಿ. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹೆಚ್ಚು ಹೆಚ್ಚು ಪದಕಗಳು ದೇಶಕ್ಕೆ ಲಭಿಸುವಂತೆ ಆಗಲಿ.

–ಕುಮಾರ್ ಹೆಬ್ಬಾಲೆ,ಮದ್ದೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.