ADVERTISEMENT

ಮಾರಾಟಗಾರರು ಸಮಗ್ರ ಮಾಹಿತಿ ನೀಡಬಲ್ಲರೇ?

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:30 IST
Last Updated 22 ಡಿಸೆಂಬರ್ 2021, 19:30 IST

ರೈತರಿಗೆ ತಂತ್ರಜ್ಞಾನ ತಲುಪಿಸಿ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಯವರು ಕೃಷಿ ಪರಿಕರ ಮಾರಾಟಗಾರರಿಗೆ ಹೇಳಿದ್ದಾರೆ (ಪ್ರ.ವಾ., ಡಿ. 21). ಇದೇ ವೇಳೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ನೇರ ಮಾರಾಟದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ತಕ್ಕ ತಿಳಿವಳಿಕೆಯ ಆಯ್ಕೆ ಅಥವಾ ನಿರ್ಧಾರ ಬರೀ ಮಾಹಿತಿಯಿಂದಷ್ಟೇ ಸಿಗುವುದಿಲ್ಲ. ಇನ್ನು ಕೃಷಿ ಪರಿಕರಗಳ ಪೂರೈಕೆ ಅಥವಾ ಮಾರಾಟ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯ. ಈ ಎರಡನ್ನೂ ಮಾಡಲು ಹೋದ ಕೃಷಿ ಇಲಾಖೆ ಯಶಸ್ವಿಯಾಗಿದೆಯೇ?

ಕೃಷಿ ಕ್ಲಿನಿಕ್‌ಗಳನ್ನು ಡಿಪ್ಲೊಮಾ ಪಡೆದವರೂ ಆರಂಭಿಸಬಹುದಿತ್ತು. ಆ ಯೋಜನೆ ಹಳತು. 2012 ಮತ್ತು 2015ರಲ್ಲಿ ಪರಿಶೀಲಿಸಿದ ಬಳಿಕವೂ ಅದು ವೇಗ ಪಡೆದಿಲ್ಲ. ಈಗ ಮಾರಾಟಗಾರರು ಪ್ರಮಾಣಪತ್ರ ಪಡೆದ ಮೇಲೆ ಅಂಗಡಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಅವರು ಉತ್ಪನ್ನಗಳ ಬಗೆಗೆ ಮಾಹಿತಿ ನೀಡಬಲ್ಲರಷ್ಟೆ. ಅದು ಸಮಗ್ರ, ಸಾಕ್ಷ್ಯಾಧಾರಿತ, ಪಕ್ಷಪಾತರಹಿತ ಜ್ಞಾನ ಆಗಿರಲಿಕ್ಕಿಲ್ಲ.

ತಂತ್ರಜ್ಞಾನವನ್ನು ಕೃಷಿಕರಿಗೆ ಸಕಾಲದಲ್ಲಿ ವರ್ಗಾಯಿಸಲು ಆಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಕುಲಪತಿಯವರು, ತಮ್ಮ ವಿಶ್ವವಿದ್ಯಾಲಯ ಆ ಕುರಿತು ನೇರವಾಗಿ ಏನು ಮಾಡಲಿದೆ ಎಂಬುದನ್ನು ಮೊದಲು ಹೇಳಲಿ.

ADVERTISEMENT

–ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.