ADVERTISEMENT

ಚುನಾವಣಾ ಸಿಬ್ಬಂದಿಗೆ ವಿಮೆ ಬೇಕು

ಭೀಮಾನಂದ ಮೌರ್ಯ
Published 24 ಏಪ್ರಿಲ್ 2019, 20:30 IST
Last Updated 24 ಏಪ್ರಿಲ್ 2019, 20:30 IST

‘ಮತಗಟ್ಟೆ ಕಾರ್ಯ ಸರಳಗೊಳಿಸಿ’ ಎಂದು ಮಧುಕುಮಾರ ಸಿ.ಎಚ್. ಆಗ್ರಹಿಸಿದ್ದಾರೆ (ಪ್ರ.ವಾ., ಏ.23). ರಾಜ್ಯದಲ್ಲಿ ಜರುಗಿದ ಎರಡು ಹಂತಗಳ ಮತದಾನದಲ್ಲಿ, ಕರ್ತವ್ಯನಿರತರಾಗಿದ್ದ ಮೂವರು ನೌಕರರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಚುನಾವಣೆ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಚುನಾವಣಾ ಆಯೋಗವು ವಿಶೇಷ ವಿಮೆ ಮಾಡಿಸುವ ಮೂಲಕ ಅವರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು.

ಡಿ ಮಸ್ಟರಿಂಗ್ ಸಂದರ್ಭದಲ್ಲಿ ಸಲ್ಲಿಸಬೇಕಾದ ಕಾಗದ ಪತ್ರಗಳ ಬಳಕೆಯನ್ನು ಒಂದೆರಡು ಸಂಪುಟಗಳಲ್ಲಿ ಕ್ರೋಡೀಕರಿಸುವಂತೆ ಮಾಡಿದರೆ, ಸಿಬ್ಬಂದಿಗೆ ಹೆಚ್ಚಿನ ಗೊಂದಲವಾಗುವುದಿಲ್ಲ. ಸಿಬ್ಬಂದಿಯನ್ನು ನೂರಾರು ಕಿ.ಮೀ. ದೂರಕ್ಕೆ ನಿಯೋಜಿಸುವ ಬದಲು, ಅವರ ಸ್ವಂತ ಸ್ಥಳ ಹಾಗೂ ಕೇಂದ್ರಸ್ಥಾನ ಹೊರತುಪಡಿಸಿ ಹತ್ತಿರದ ಮತಗಟ್ಟೆಗಳಿಗೆ ನಿಯೋಜಿಸುವುದರಿಂದಲೂ ಅವರ ಮೇಲಿನ ಒತ್ತಡ ತಗ್ಗಿಸಬಹುದು. ಈ ದಿಸೆಯಲ್ಲಿ ಆಯೋಗ ಕ್ರಮ ಕೈಗೊಳ್ಳಲಿ.

– ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.