ADVERTISEMENT

ವಾಚಕರ ವಾಣಿ: ಆತಂಕದ ರೋಗಕ್ಕೆ ಐಪಿಎಲ್ ಮದ್ದು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST

ಕೆಲ ತಿಂಗಳುಗಳಿಂದ ಕಾಡಿದ್ದ ಕೊರೊನಾದಿಂದ ಜನ ಮನೆಯಲ್ಲೇ ಕೂತು ಬೇಸರಕ್ಕೆ ಒಳಗಾಗಿದ್ದರು. ಟಿ.ವಿಯ ಯಾವ ನ್ಯೂಸ್ ಚಾನೆಲ್ ಹಾಕಿದರೂ ಕೊರೊನಾ ಸುದ್ದಿಯನ್ನೇ ನೋಡಿ ರೋಸಿ ಹೋಗಿದ್ದರು. ಐಪಿಎಲ್ ಶುರುವಾಗುವ ಮುಖಾಂತರ ಆ ಬೇಸರವನ್ನು ಕೊಂಚ ನೀಗಿಸಿದಂತಾಗಿದೆ.

ಇಷ್ಟು ದಿನ ಕೊರೊನಾದ ಬಗ್ಗೆ ದೈನಂದಿನ ಮಾಹಿತಿಯನ್ನು, ಅಂದರೆ ಯಾವ ರಾಜ್ಯದಲ್ಲಿ ಎಷ್ಟು ಏರಿಕೆಯಾಗಿದೆ, ಸತ್ತವರೆಷ್ಟು, ಗುಣಮುಖರಾದವರ ಸಂಖ್ಯೆ ಎಷ್ಟು ಎಂಬ ಲೆಕ್ಕಾಚಾರಗಳನ್ನೇ ನೋಡುತ್ತಿದ್ದವರಿಗೆ ಇನ್ನು ಕೆಲ ದಿನಗಳ ಕಾಲ ಐಪಿಎಲ್ ಆಟಗಾರರ ರನ್‌ಗಳು, ವಿಕೆಟ್‌ಗಳು, ತಂಡದ ಪಾಯಿಂಟ್ ಪಟ್ಟಿಗಳನ್ನು ಲೆಕ್ಕಾಚಾರ ಹಾಕುವ ಅವಕಾಶ ಸಿಕ್ಕಿದೆ. ಕ್ರೀಡಾಪ್ರಿಯರಿಗೆ ಐಪಿಎಲ್ ಮಾನಸಿಕ ಮದ್ದಾಗಿ ಬಂದಂತಿದೆ. ಕೊರೊನಾ ಎಂದರೆ

ಭಯಪಡುವುದಲ್ಲ, ಎಚ್ಚರಿಕೆಯಿಂದ ಇರುವುದು ಎಂದು ಇನ್ನಾದರೂ ತಿಳಿದು, ಅದರ ಜಪ ಮಾಡುವುದನ್ನು ಬಿಟ್ಟು, ಬೇರೆ ಕಾರ್ಯದಲ್ಲಿ ನಿರತರಾಗುವುದು ಒಳ್ಳೆಯದು.

ADVERTISEMENT

-ಯೋಗೇಶ್ ವೈ.ಸಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.