ADVERTISEMENT

ವಾಚಕರ ವಾಣಿ: ಹೊಣೆ ಅರಿತು ಬದುಕು ನಡೆಸೋಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:30 IST
Last Updated 2 ಸೆಪ್ಟೆಂಬರ್ 2022, 19:30 IST

ಈಚೆಗೆ ಸುರಿದ ಭಾರಿ ಮಳೆಯಿಂದ ಬರದ ನಾಡಿನಲ್ಲೂ ಜಲಸಿರಿ ಉಕ್ಕಿಹರಿದಿದೆ. ವಾಡಿಕೆ ಮಳೆ ಸುರಿಯುವುದು ಕೂಡ ಅಪರೂಪ ಎಂಬಂತಾಗಿರುವ ಬಯಲುಸೀಮೆಯ ಪ್ರದೇಶಗಳು, ಒಂದು ವಾರದಿಂದ ಅತಿವೃಷ್ಟಿ ಸಂದರ್ಭವನ್ನು ಎದುರಿಸುತ್ತಿವೆ. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮರಳು ಗಣಿಗಾರಿಕೆಯ ಹಾವಳಿ ಅತಿಯಾಗಿದೆ. ಅರಣ್ಯ ಒತ್ತುವರಿಯಿಂದ ಹಳ್ಳ-ತೊರೆಗಳು ನೆಲಸಮವಾಗಿವೆ. ಅರಣ್ಯ ಪ್ರದೇಶವು ಬಂಜರು ಭೂಮಿಯಾಗಿದೆ. ಕೆರೆ ಕಾಲುವೆಗಳ ಅಸಮರ್ಪಕ ನಿರ್ವಹಣೆ ಹಾಗೂ ಅಭಿವೃದ್ದಿ ಹೆಸರಲ್ಲಿ ವ್ಯಾಪಕ ಅರಣ್ಯ ನಾಶದಿಂದ ಧರೆಗೆ ಸುರಿದ ಮಳೆಯು ಭೂಮಿಗೆ ಇಂಗದೇ, ಊರು-ಕೇರಿ ಮುಳುಗಡೆಯಾಗುವಂತೆ ಮಾಡಿದೆ. ನೈಸರ್ಗಿಕ ಸಂಪತ್ತನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಇನ್ನಾದರೂ ಅರಿತು ಬಾಳಬೇಕಿದೆ.

-ಮಂಜುನಾಥ ವಿ.ಜೆ., ವೇದಲವೇಣಿ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT