ADVERTISEMENT

ವಾಚಕರ ವಾಣಿ: ರಂಜಾನ್‌ಗೆ ಅಮೂಲ್ಯ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:30 IST
Last Updated 2 ಮೇ 2022, 19:30 IST

‘ಈದ್ಗಾ ಗೋಡೆ ನಿರ್ಮಾಣಕ್ಕೆ ಹಿಂದೂಗಳ ಭೂಮಿ’ ಸುದ್ದಿ (ಪ್ರ.ವಾ., ಮೇ 2) ಓದಿ ‘ಆಹಾ ನನ್ನ ಭಾರತವೇ’ ಎಂಬ ಭಾವನೆ ಮನದುಂಬಿ ಬಂತು. ದಾವಣಗೆರೆ ತಾಲ್ಲೂಕಿನ ಅಣಬೇರು ಗ್ರಾಮದಲ್ಲಿ ಈದ್ಗಾ ಮೈದಾನದ ಗೋಡೆ ನಿರ್ಮಾಣಕ್ಕೆ ರಾಜಪ್ಪ ಎಂಬುವರು ತಮ್ಮ ಜಮೀನಿನ ಸ್ವಲ್ಪ ಭಾಗವನ್ನು ನೀಡಿ ಸಾಮರಸ್ಯ ಮೆರೆದಿರುವುದು ಕೋಮು ಕೊಳ್ಳಿ ಹಿಡಿದ ಸೀಮಿತ ಮಂದಿಗೆ ಪಾಠವಾಗಿದೆ.

ಎಲ್ಲರೊಳಗೊಂದಾಗುವ, ಎಲ್ಲರೊಂದೆನ್ನುವ ಭಾವ, ಭಾರತೀಯ ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಜೀವಂತ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಕುರಾನ್, ಬೈಬಲ್, ಗ್ರಂಥಸಾಹಿಬ್‌ಗಳ ಸಾರ ಇಷ್ಟೇ: ಬದುಕು, ಬದುಕಲು ಬಿಡು. ಅಣಬೇರು ಗ್ರಾಮದ ಜನತೆ ನಿಜಕ್ಕೂ ಮುಸ್ಲಿಂ ಸಮುದಾಯದವರಿಗೆ ನೀಡಿದ ರಂಜಾನ್‌ನ ಅಮೂಲ್ಯ ಉಡುಗೊರೆ ಇದು. ಈ ಭಾವ ಭಾರತದಾದ್ಯಂತ ಹರಡಲಿ.

- ಸಂತೆಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.