ADVERTISEMENT

ಕಪ್ಪೆ ತಪ್ಪಿಸುವುದೇ ಕೆಪ್ಪೆ ಹೊಡೆತ?

ಎಚ್.ಆನಂದರಾಮ ಶಾಸ್ತ್ರೀ
Published 9 ಜೂನ್ 2019, 18:30 IST
Last Updated 9 ಜೂನ್ 2019, 18:30 IST

ಮಳೆಗಾಗಿ ಉಡುಪಿಯಲ್ಲಿ ಈಚೆಗೆ ಕಪ್ಪೆಗಳ ಮದುವೆ ಮಾಡಿದ್ದಾರೆ. ಅದೇ ವೇಳೆ, ಬರ ನಿರ್ವಹಣೆ ವಿಷಯದಲ್ಲಿ ತಪ್ಪು ಮಾಹಿತಿ ಕೊಡುವ ಅಧಿಕಾರಿಗಳ ಕೆಪ್ಪೆಗೆ (ಕೆನ್ನೆಗೆ) ಹೊಡೆಯುವುದಾಗಿ ರಾಯಚೂರು ಜಿಲ್ಲೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ (ಪ್ರ.ವಾ., ಜೂನ್ 9).

ವಿಚಾರಶೀಲರು ಎನಿಸಿಕೊಂಡಿರುವ ಉಡುಪಿಯವರು ಕಪ್ಪೆ ಮದುವೆಯ ಮೌಢ್ಯ ತೋರುತ್ತಿದ್ದಾರೆಂದು ಕೆಲ ವಿಚಾರವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಡೂಕವಿವಾಹ ಸಂಘಟಕರ ಕೆಪ್ಪೆಗೆ ಹೊಡೆದಂತೆ ಕಮೆಂಟ್ ಮಾಡತೊಡಗಿದ್ದರೆ, ರಾಯಚೂರಿನ ಅಧಿಕಾರಿಗಳು ಕಪ್ಪೆಗಳಂತೆ ಆಚೆ ಜಿಗಿದು ಕೆಪ್ಪೆ ಮೋಕ್ಷದಿಂದ ತಪ್ಪಿಸಿಕೊಳ್ಳುವ ಉಪಾಯ ಹುಡುಕತೊಡಗಿದ್ದಾರಂತೆ.

ಮುಂದೆ ಏನಾಗುವುದೋ ಗೊತ್ತಿಲ್ಲ. ಉಡುಪಿಯ ಕಪ್ಪೆ ಮದುವೆಯಿಂದ ರಾಯಚೂರಿನಲ್ಲಿ ಮಳೆ ಬಂದು, ಎರಡೂ ಊರುಗಳವರು ‘ಕೆಪ್ಪೆ ಹೊಡೆತ’ದಿಂದ ಪಾರಾಗಲಿ ಎಂದು ಆಶಿಸೋಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.