ADVERTISEMENT

ಮಾದರಿ ಶಿಕ್ಷಣ ನೀತಿ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 20:00 IST
Last Updated 22 ನವೆಂಬರ್ 2020, 20:00 IST

ದೆಹಲಿಯಲ್ಲಿನ ಶೈಕ್ಷಣಿಕ ಪ್ರಗತಿಯ ಚಿತ್ರಣವನ್ನು ಡಾ. ಎಚ್.ಬಿ.ಚಂದ್ರಶೇಖರ್ (ಸಂಗತ, ನ. 19) ಕಟ್ಟಿಕೊಟ್ಟಿದ್ದಾರೆ. ಯಾವ ಹಂತದ ಮಕ್ಕಳಿಗೆ ಯಾವ ಬಗೆಯ ಶಿಕ್ಷಣ ಕೊಡಬೇಕು, ಪಠ್ಯಕ್ರಮಗಳು ಹಾಗೂ ಪಠ್ಯದ ವಿಷಯವಸ್ತು ಹೇಗಿರಬೇಕು ಎಂಬುದರ ಬಗ್ಗೆ ಕೂಲಂಕಷ ಚರ್ಚೆ ಮತ್ತು ವೈಜ್ಞಾನಿಕ ಯೋಜನೆ ಇಲ್ಲದೆ ತೆಗೆದುಕೊಳ್ಳುವ ಆತುರದ ನಿರ್ಧಾರಗಳು ಪೋಷಕರು, ಮಕ್ಕಳು ಹಾಗೂ ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಶಿಕ್ಷಕರಿಗೆ ಪಾಠಕ್ಕಿಂತ ಆಡಳಿತ ನಿರ್ವಹಣೆಯೇ ದೊಡ್ಡ ಹೊರೆಯಾಗುತ್ತಿದೆ.

ಪ್ರೋತ್ಸಾಹಕರ ಯೋಜನೆಗಳಡಿ ಮಕ್ಕಳಿಗೆ ನೀಡುತ್ತಿರುವ ವಸ್ತುಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ. ಕೆಲವು ಶಾಲಾ ಕಟ್ಟಡಗಳು ಮಳೆಗೆ ಯಾವಾಗ ಬೀಳುತ್ತವೋ ಎಂಬ ಭಯದಲ್ಲಿ ದಿನ ದೂಡುವ ಸ್ಥಿತಿ ಇದೆ. ಇಂತಹ ಅವ್ಯವಸ್ಥೆಯ ಮಧ್ಯೆ, ದೇಶಕ್ಕೆ ಮಾದರಿಯಾಗುವಂತಿರುವ ದೆಹಲಿ ಸರ್ಕಾರದ ಶಿಕ್ಷಣ ನೀತಿಯನ್ನು ನಮ್ಮ ರಾಜ್ಯವೂ ಅಳವಡಿಸಿಕೊಳ್ಳಲಿ.
-ಶಿವಕುಮಾರ್ ಯರಗಟ್ಟಿಹಳ್ಳಿ,ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT