ADVERTISEMENT

ನೂರು ವರ್ಷದ ಹಿಂದೆ ಹೀಗಿದ್ದಿರಬಹುದೇ?

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST

ಹೆಸರು ಬನ್ನೇರುಘಟ್ಟದ ರಸ್ತೆ. ಆದರೂ ಒಂದೂ ಪಕ್ಷಿ ಇಲ್ಲ! ದಿನಕ್ಕೆ ಸಾವಿರಾರು ರಾಕ್ಷಸರೂಪಿ ವಾಹನಗಳ ದೂಳು, ಹೊಗೆ, ಕಿವಿಗಡಚಿಕ್ಕುವಷ್ಟು ಶಬ್ದ, ಈ ಪರಿಸರದಲ್ಲಿ ಮರಗಳಿದ್ದರೂ ಅಪಾರ ಜನಸಂದಣಿಯಿಂದ ಪಕ್ಷಿಗಳು ಕಾಣೆಯಾಗಿದ್ದವು. ಆದರೆ ಇದೀಗ ದಿಗ್ಬಂಧನದಿಂದಾಗಿ ಎಲ್ಲವೂ ಶಾಂತ, ಸ್ತಬ್ಧ, ಶುಭ್ರ, ಸುಂದರ.

ಖುಷಿಯ ಸಂಗತಿ ಅಂದರೆ, ಎಂದೂ ಕಾಣದ ಪಕ್ಷಿಗಳು ಇಲ್ಲಿ ನಮ್ಮ ಮನೆ ಸುತ್ತಲೂ ಚಿಲಿಪಿಲಿಗುಟ್ಟುತ್ತಿವೆ. ಹತ್ತಾರು ಜಾತಿಯ ಹಕ್ಕಿಗಳು ನಾವು ಕುಂತಲ್ಲೇ ಕಾಣುತ್ತಿವೆ. ನೂರು ವರ್ಷದ ಹಿಂದಿನ ಬೆಂಗಳೂರು ಹೇಗಿದ್ದಿರಬಹುದೆಂದು ಈಗ ಊಹಿಸಬಹುದು. ಈ ಕಾರಣಕ್ಕಾದರೂ ಕೊರೊನಾ ಹೆಮ್ಮಾರಿಗೆ ಒಂದು ಧನ್ಯವಾದ ಹೇಳಬಹುದೇ?

-ಪ್ರೊ. ಜಿ.ಎಚ್.ಹನ್ನೆರಡುಮಠ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.