ADVERTISEMENT

ಗ್ರಾಮ ಪಂಚಾಯಿತಿಗೂ ಬೇಕು ‘ನೋಟಾ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 17:29 IST
Last Updated 10 ಸೆಪ್ಟೆಂಬರ್ 2020, 17:29 IST

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಇದರ ಮೊದಲ ಭಾಗವಾಗಿ ಮೀಸಲಾತಿ ಹಾಗೂ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ‘ನೋಟಾ’ ಸೌಲಭ್ಯ ಜಾರಿಗೆ ತರುವ ಲಕ್ಷಣವನ್ನು ಆಯೋಗ ತೋರುತ್ತಿಲ್ಲ. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮತದಾರರಿಗೆ ನೋಟಾ ಅವಕಾಶವಿದೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇದುವರೆಗೂ ನೋಟಾ ಜಾರಿಗೆ ತಂದಿಲ್ಲ. ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿಯಾರೊಬ್ಬರೂ ಮತದಾರರಿಗೆ ಯೋಗ್ಯರೆನಿಸದೇ ಇದ್ದಲ್ಲಿ, ಇರುವವರಲ್ಲಿ ಒಬ್ಬರು ಅನಿವಾರ್ಯ ಆಯ್ಕೆಯಾಗ
ಬಾರದು. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ನೋಟಾ ಜಾರಿಗೆ ತರುವುದು ಅಗತ್ಯ.

– ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT