ADVERTISEMENT

ವಾಚಕರ ವಾಣಿ: ಈರುಳ್ಳಿ ಬೆಲೆ ನಿಯಂತ್ರಿಸಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 17:46 IST
Last Updated 21 ಅಕ್ಟೋಬರ್ 2020, 17:46 IST

ಈರುಳ್ಳಿ ಬೆಲೆ ಗಗನಕ್ಕೆ ಏರಿದೆ. ಹಾಗೆಂದು ಈ ಏರಿದ ಬೆಲೆಯ ಪ್ರಯೋಜನ ರೈತರಿಗೆ ಆಗುತ್ತಿಲ್ಲ. ನಮ್ಮೂರಿನ ರೈತನೊಬ್ಬ ಒಂದು ತಿಂಗಳ ಹಿಂದೆ ಈರುಳ್ಳಿ ಮಾರಿದಾಗ ಅವನಿಗೆ ಸಿಕ್ಕಿದ್ದು ಕೆ.ಜಿ.ಗೆ ₹ 25 ಮಾತ್ರ. ಆದರೀಗ ಅದರ ಬೆಲೆ ₹ 100 ಆಗಿದೆಯೆಂದರೆ ಅವನಿಗೆ ಏನನಿಸಬಹುದು? ರೈತರಿಂದ ಕಡಿಮೆ ದರಕ್ಕೆ ಖರೀದಿಸಿ ಈ ಪರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸರಿಯಲ್ಲ. ಮಳೆಯಿಂದಾಗಿ ರೈತರ ಬೆಳೆ ಈಗ ನಾಶವಾಗಿರಬಹುದು. ಆದರೆ ಈವರೆಗೆ ಉಗ್ರಾಣದಲ್ಲಿ ಶೇಖರಿಸಿ ಕೃತಕ ಅಭಾವ ಉಂಟು ಮಾಡಿ, ಈರುಳ್ಳಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಸರ್ಕಾರ ನಿಯಂತ್ರಿಸಲಿ. ಮಳೆಯಿಂದ ಭೂಮಿಯಲ್ಲೇ ಈರುಳ್ಳಿ ಬೆಳೆ ನಾಶವಾದ ರೈತರ ನೆರವಿಗೆ ಮುಂದಾಗಲಿ.

-ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT