ವೀಲ್ಚೇರ್ ರೋಮಿಯೋ, ಟ್ವೆಂಟಿ ಒನ್ ಅವರ್ಸ್, ಹೆಡ್ ಬುಷ್... ಇವು ಇಂಗ್ಲಿಷ್ ಸಿನಿಮಾಗಳ ಶೀರ್ಷಿಕೆಗಳು ಅಂದುಕೊಂಡರೆ ಖಂಡಿತಾ ತಪ್ಪು. ಇವು ಇತ್ತೀಚಿನ ಕನ್ನಡ ಸಿನಿಮಾಗಳ ಹೆಸರುಗಳು. ಸಿನಿಮಾ ಹೆಸರುಗಳನ್ನು ಕನ್ನಡದಲ್ಲಿ ಇಡುವುದು ಅಷ್ಟು ಕಷ್ಟವೇ?
ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕಸ್ತೂರಿ ಕನ್ನಡದ ಭಾಷಾಭಿಮಾನ ಮೆರೆದ ಕರ್ನಾಟಕ ಸಂಜಾತ ಚಂದ್ರ ಆರ್ಯ ಅಂಥವರು ನಿಜವಾಗಲೂ ಕನ್ನಡ ಭಾಷೆಯ ರಾಯಭಾರಿಗಳಂತೆ ಭಾಸವಾಗುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿರುವ ಶೀರ್ಷಿಕೆಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇನ್ನಾದರೂ ಅನುಮತಿ ನೀಡದಿರಲಿ. ಕನ್ನಡತನವನ್ನು ಮೆರೆಯಲು ಈ ಮೂಲಕ ಅನುವು ಮಾಡಿಕೊಡಲಿ.
-ಟಿ.ಎಸ್.ಪ್ರತಿಭಾ,ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.