ADVERTISEMENT

ವಾಚಕರ ವಾಣಿ | ಆದರ್ಶ ಉದ್ಯಮಿ ಬಜಾಜ್‌

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಫೆಬ್ರುವರಿ 2022, 19:45 IST
Last Updated 13 ಫೆಬ್ರುವರಿ 2022, 19:45 IST

ಇತ್ತೀಚೆಗೆ ನಿಧನರಾದ ಉದ್ಯಮಿ ರಾಹುಲ್ ಬಜಾಜ್ ಅವರು ದ್ವಿಚಕ್ರ, ತ್ರಿಚಕ್ರ ಉತ್ಪಾದಕ ಬಜಾಜ್ ಸಂಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವುದರಲ್ಲಿ ಸಫಲರಾಗಿದ್ದರು. ಯಾವ ಪಕ್ಷವೇ ಸರ್ಕಾರಗಳನ್ನು ನಡೆಸುತ್ತಿರಲಿ, ಸರ್ಕಾರದ ಧೋರಣೆಗಳು ಸರಿಯಿಲ್ಲವೆಂದಾದರೆ ನೇರವಾಗಿಯೇ ಟೀಕಿಸುತ್ತಿದ್ದರು. ಉದ್ಯಮ ರಂಗದಲ್ಲಿ ಇದ್ದುಕೊಂಡು ‘ಜೀ ಹುಜೂರ್’ ಎನ್ನದೇ ವ್ಯವಸ್ಥೆಯ ವಿರುದ್ಧ ಮಾತನಾಡುವುದು ಬಹುಶಃ ರಾಹುಲ್ ಬಜಾಜ್ ಅವರಂತಹ ಧೈರ್ಯಶಾಲಿಗಳಿಗೆ ಮಾತ್ರ ಸಾಧ್ಯ.

ಸಂಸ್ಥೆಯನ್ನು ತೀವ್ರ ಪೈಪೋಟಿಯ ನಡುವೆಯೂ ಮುನ್ನಡೆಸುವುದನ್ನು ಅಂತಹವರಿಂದ ನೋಡಿ ಕಲಿಯಬೇಕು. ಬಜಾಜ್‌ ಚೇತಕ್‌ ಹೊಸ ವಾಹನವನ್ನು ಕೊಳ್ಳಲು ಜನ ವರ್ಷಾನುಗಟ್ಟಲೆ ಕಾಯಬೇಕಾದಂತಹ ಸಂದರ್ಭ ಇದ್ದಾಗಲೂ ಆ ವಾಹನದ ಬೆಲೆ ಏರಿಸುವ ಆಮಿಷಕ್ಕೆ ಒಳಗಾಗದೆ, ಮಧ್ಯಮ ವರ್ಗಕ್ಕೆ ಕೈಗೆಟಕುವ ಬೆಲೆಗೆ ದೊರಕುವಂತೆ ನೋಡಿಕೊಂಡು ಆದರ್ಶ ಉದ್ಯಮಿಯಾಗಿದ್ದರು.

- ಭರತ್ ಬಿ.ಎನ್.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.