ADVERTISEMENT

ವಾಚಕರ ವಾಣಿ | ಮಾಸ್ಕ್ ದಂಡ: ಇರಲಿ ಮಾನವೀಯ ಸಂವೇದನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಫೆಬ್ರುವರಿ 2022, 19:30 IST
Last Updated 20 ಫೆಬ್ರುವರಿ 2022, 19:30 IST

ಬೆಂಗಳೂರಿನ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣದಲ್ಲಿ ಹೊರಜಿಲ್ಲೆಗಳಿಂದ ಬರುವ ಬಸ್‌ಗಳು ಬಂದು ನಿಲ್ಲುವ ಸ್ಥಳಗಳಲ್ಲಿ ಬಿಬಿಎಂಪಿ ಮಾರ್ಷಲ್‍ಗಳು ನಿಂತು, ಮಾಸ್ಕ್‌ರಹಿತರಿಗೆ ದಂಡ ಹಾಕುತ್ತಾರೆ. ಈ ಪ್ರಯಾಣಿಕರು ಬಸ್‍ನಿಂದ ಇಳಿದು ನಾಲ್ಕು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಮಾರ್ಷಲ್‍ಗಳು ಬಂದು ಹಿಡಿಯುತ್ತಾರೆ. ಎಷ್ಟೋ ಸಲ ಪ್ರಯಾಣಿಕರ ಕಿಸೆಯಲ್ಲಿ ಮಾಸ್ಕ್ ಇರುತ್ತದೆ. ರಾತ್ರಿಯಿಡೀ ನಿದ್ದೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸಿ, ಬೆಳಿಗ್ಗೆ ಇಳಿಯುವಾಗ ತರಾತುರಿಯಲ್ಲಿ ಮಾಸ್ಕ್ ಹಾಕಲು ಮರೆಯುವುದು ಸಹಜ. ಅದರಲ್ಲೂ ಇವರು ಹೊರ ಜಿಲ್ಲೆಯವರೆಂದು ಗೊತ್ತಾದರೆ, ಮಾರ್ಷಲ್‌ಗಳ ಮಾತಿನ ವರಸೆಯೇ ಬದಲಾಗುತ್ತದೆ. ಉತ್ತರ ಕರ್ನಾಟಕದಿಂದ ಕೂಲಿಗೆಂದು ಬರುವ ಎಷ್ಟೋ ಮಂದಿ ಈ ರೀತಿ ಮಾಸ್ಕ್ ಧರಿಸದ ಕಾರಣಕ್ಕೆ ಅಸಹಾಯಕರಾಗಿ ದಂಡ ತೆರುತ್ತಿರುವುದನ್ನು ನೋಡಿದ್ದೇನೆ.

ಮಾಸ್ಕ್ ಹಾಕುವುದರ ಬಗ್ಗೆ ಬೆಂಗಳೂರಿನಲ್ಲಿ ಇರುವಷ್ಟು ಬಿಗಿ ಕ್ರಮ ಬೇರೆ ಜಿಲ್ಲೆಗಳಲ್ಲಿ ಇರುವುದಿಲ್ಲ. ಹೀಗಾಗಿ, ಸಾರ್ವಜನಿಕರು ಅದೇ ಭಾವನೆಯಲ್ಲಿ ಬೆಂಗಳೂರಿಗೆ ಬಂದಿರುವ ಸಾಧ್ಯತೆ ಇರುತ್ತದೆ. ಮಾಸ್ಕ್ ಇದ್ದೂ ಹಾಕಲು ಮರೆತವರಿಗೆ ಹೀಗೆ ದಂಡ ಹಾಕುವ ಬದಲು, ಹಾಕಿಕೊಳ್ಳುವಂತೆ ಸೂಚನೆ ನೀಡಿ ಕಳುಹಿಸಬಾರದೇಕೆ? ಕೋವಿಡ್ ಪ್ರಕರಣಗಳು ಇಳಿಮುಖವಾಗಿರುವುದರಿಂದ ಬಹುತೇಕ ನಿಯಮಗಳನ್ನು ಸರ್ಕಾರ ಕೈಬಿಡುತ್ತಾ ಬಂದಿದೆ. ಮಾಸ್ಕ್ ಧರಿಸುವುದು ಉತ್ತಮವಾದರೂ, ಧರಿಸದವರಿಗೆ ಹೀಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವ ಬದಲು ಅದನ್ನು ಧರಿ ಸಲು ಪ್ರೇರೇಪಿಸುವುದು ಉತ್ತಮವಲ್ಲವೇ? ಅಥವಾ ಹಣ ಪಡೆದು ಮಾರ್ಷಲ್‍ಗಳೇ ಅವರಿಗೆ ಮಾಸ್ಕ್ ನೀಡಬಹುದಲ್ಲವೇ?

- ಅಬ್ದುಲ್ ಖಾದರ್, ಚಿಕ್ಕಮಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.