ADVERTISEMENT

ಶಿಕ್ಷಕರಿಗೆ ವರ್ಗಾವಣೆ ‘ಭಾಗ್ಯ’ ಸಿಗಲಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 16:52 IST
Last Updated 9 ಜುಲೈ 2019, 16:52 IST

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರತಿವರ್ಷ ನಡೆದರೂ ನತದೃಷ್ಟ ಶಿಕ್ಷಕರ ವರ್ಗಾವಣೆ ನಡೆದು ಮೂರು ವರ್ಷಗಳೇ ಕಳೆದು ಹೋದವು. ಈ ವರ್ಷವಾದರೂ ವರ್ಗಾವಣೆ ಆಗಬಹುದು ಎಂದು ಬಯಸಿರುವವರಿಗೆ ಸರ್ಕಾರದಲ್ಲಿನ ಗೊಂದಲ, ರಾಜಕೀಯ ಪಕ್ಷಗಳ ವಿಕೃತ ಆಟ, ವರ್ಗಾವಣಾ ನಿಯಮದಲ್ಲಿನ ಲೋಪಗಳು ನಿರಾಶೆ ಉಂಟುಮಾಡಿವೆ.

ಒಂದೇ ತಾಲ್ಲೂಕಿನಲ್ಲಿ ಕೆಲಸ ಮಾಡುವ ಪತಿ-ಪತ್ನಿಗೆ ಮತ್ತೊಂದು ಅವಕಾಶ ನೀಡುವುದು ಎಷ್ಟು ಸಮಂಜಸ? ಮೂರು ವರ್ಷಗಳ ಹಿಂದೆ ನನ್ನ ಪರಿಚಯದ ದಂಪತಿ ಅರ್ಜಿ ಹಾಕಿ ವರ್ಗಾವಣೆ ಪಡೆದರು. ಅವರಿಬ್ಬರೂ ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸತಿ-ಪತಿ ಪ್ರಕರಣದಲ್ಲಿ ಅರ್ಜಿ ಹಾಕಿ ವರ್ಗಾವಣೆಗೊಂಡು ಮತ್ತೆ ಒಂದೇ ಶಾಲೆಗೆ ಹೋದರು! ಇಂಥ ಸನ್ನಿವೇಶಗಳಲ್ಲಿ ಅಲ್ಲಿರುವ ಇತರ ಶಿಕ್ಷಕರಿಗೆ ವರ್ಗಾವಣೆ ಮರೀಚಿಕೆಯಾಗುತ್ತಿದೆ.

ಎಷ್ಟು ವರ್ಷಗಳಾದರೂ ಸ್ವಂತ ಸ್ಥಳಕ್ಕೆ ಹೋಗಲಾರದೆ, ಅಲ್ಲಿರುವ ವೃದ್ಧ ತಂದೆ ತಾಯಿಯ ಜೊತೆ ಇರಲಾಗದೆ ಮಾನಸಿಕ ನೋವು ಅನುಭವಿಸುವ ಶಿಕ್ಷಕರ ಸಂಖ್ಯೆಯೂ ಕಡಿಮೆಯಿಲ್ಲ. ಇಳಿವಯಸ್ಸಿನಲ್ಲಿ ಮಗ ಅಥವಾ ಸೊಸೆ ಜೊತೆಗಿಲ್ಲ ಎನ್ನುವ ಕೊರಗು ತಂದೆ-ತಾಯಿಗೆ ಕಾಡಿ, ತಮ್ಮ ಪುತ್ರನ ಮೇಲೆಯೇ ಅನುಮಾನ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗೆ, ವರ್ಗಾವಣೆಯಲ್ಲಿ ಸತಿ–ಪತಿಯನ್ನು ಮಾತ್ರ ಪರಿಗಣಿಸಿ ತಂದೆ–ತಾಯಿಯನ್ನು ಕಡೆಗಣಿಸುವ ಸರ್ಕಾರದ ಧೋರಣೆ ಎಷ್ಟು ಸರಿ?
-ಮಂಜುನಾಥ ಸು.ಮ., ಚಿಂತಾಮಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.