ADVERTISEMENT

ವಾಚಕರ ವಾಣಿ | ಭೂ ಮೋಜಣಿ: ಮಾಹಿತಿ ಯಾಕಿಲ್ಲ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಅಕ್ಟೋಬರ್ 2022, 21:16 IST
Last Updated 28 ಅಕ್ಟೋಬರ್ 2022, 21:16 IST

ರಾಜ್ಯದಲ್ಲಿ ಭೂಮಾಪನ ತರಬೇತಿ ಕೇಂದ್ರಗಳು ಇರುವ ಬಗ್ಗೆ ಹಲವಾರು ಜನರಿಗೆ ತಿಳಿವಳಿಕೆ ಇಲ್ಲ. ಈ ಕೇಂದ್ರಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ತಮ್ಮ ಕೇಂದ್ರದಲ್ಲಿ ಲಭ್ಯವಿರುವ ತರಬೇತಿಗಳ ಬಗ್ಗೆ ಮಾಹಿತಿ ನೀಡಿದ ಉದಾಹರಣೆ ಇಲ್ಲ. ಕೊನೆಯ ಪಕ್ಷ ಕರಪತ್ರ, ಪೋಸ್ಟರ್ ಮೂಲಕವಾದರೂ ತಮ್ಮ ಭಾಗದ ಯುವಕರಿಗೆ ತರಬೇತಿ ನೀಡಬಹುದು. ಆ ಮೂಲಕ ಅವರನ್ನು ಭೂ ಮೋಜಣಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು.

ರೈತರ ಜಮೀನುಗಳ ಭೂ ಮೋಜಣಿಗೆ ಬಹಳ ಅವಶ್ಯವಾದ ಈ ಕಾರ್ಯದ ಬಗ್ಗೆ ಕೆಲವೇ ಕೆಲವು ಮಂದಿ ತಿಳಿದುಕೊಂಡಿದ್ದಾರೆ. ಹೀಗಾಗಿ, ಅವರ ಸಂಖ್ಯೆಯು ಮೋಜಣಿಗಳ ಬೇಡಿಕೆಗಳ ಈಡೇರಿಕೆಗೆ ಸಾಲದಾಗಿದೆ. ಎಸ್ಎಸ್ಎಲ್‌ಸಿ ಪಾಸ್ ಮಾಡಿದವರಿಗೆ ಈ ವಿಷಯದಲ್ಲಿ ಒಂದು ಸರ್ಟಿಫಿಕೇಟ್ ಕೋರ್ಸ್ ಮಾಡಿದರೆ ಒಳ್ಳೆಯದು. ಇದರಿಂದ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಬಹುದು, ಸರ್ಕಾರಿ ಉದ್ಯೋಗಕ್ಕಿಂತ ಹೆಚ್ಚಿನ ಹಣ ಕೂಡ ಗಳಿಸಬಹುದು.

-ಎಸ್.ಆರ್.ಬಿರಾದಾರ,ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.