ADVERTISEMENT

ವಾಚಕರ ವಾಣಿ | ನಿಲ್ದಾಣಕ್ಕೆ ನಾಮಕರಣ: ಇತಿಹಾಸ ಪರಿಗಣಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಅಕ್ಟೋಬರ್ 2022, 21:30 IST
Last Updated 27 ಅಕ್ಟೋಬರ್ 2022, 21:30 IST

ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಲು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ತೀರ್ಮಾನಿಸಿದೆ. ಇದನ್ನು ಬದಲಾವಣೆ ಮಾಡಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರನ್ನು ಇಡಬೇಕು. ಹಾಗೆಯೇ ವಿಜಯಪುರಕ್ಕೆ ಸಿದ್ಧರಾಮೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವುದು ಒಳಿತು. ಇದಕ್ಕೆ ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಕಾರಣವಿದೆ. ಬಸವಣ್ಣನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಾದರೂ ಅವರ ಕಾರ್ಯಕ್ಷೇತ್ರ ಕಲ್ಯಾಣ ಕರ್ನಾಟಕ. ಅದರ ರಾಜಧಾನಿ ಕಲಬುರಗಿ.

ಇನ್ನು ವಿಜಯಪುರಕ್ಕೆ ಬಸವಣ್ಣನವರ ಸಮಕಾಲೀನ ಶರಣರಾದ ಸಿದ್ಧರಾಮೇಶ್ವರರ ಹೆಸರಿಡುವುದು ಔಚಿತ್ಯಪೂರ್ಣ. ಏಕೆಂದರೆ ವಿಜಯಪುರವು ಸಿದ್ಧರಾಮರ ಕಾರ್ಯಕ್ಷೇತ್ರ. ಅವರ ನೆಲೆವೀಡಾದ ಸೋಲಾಪುರ ಅದರ ಸಮೀಪವೇ ಇದೆ. ಅಲ್ಲದೆ ಅಲ್ಲಿನ ಸಿದ್ಧೇಶ್ವರ ದೇವಾಲಯ ಪ್ರಸಿದ್ಧವಾಗಿದೆ. ಇದರಿಂದ ಹೊರ ರಾಜ್ಯದ ಮತ್ತೊಬ್ಬ ಮಹಾನ್‌ ಶಿವಶರಣನಿಗೊಂದು ಗೌರವ ಸ್ಮಾರಕ ಮಾಡಿದ ಶ್ರೇಯಸ್ಸು ಕರ್ನಾಟಕ ಸರ್ಕಾರಕ್ಕೆ ಲಭಿಸಿದಂತಾಗುವುದು. 12ನೇ ಶತಮಾನದ ಕಾಯಕಯೋಗಿ, ಧರ್ಮಗುರು, ಪ್ರಮುಖ ವಚನಕಾರರೊಬ್ಬರನ್ನು ಗೌರವಿಸಿದಂತಾಗುತ್ತದೆ. ಇಷ್ಟಕ್ಕೂ ಸಿದ್ಧರಾಮೇಶ್ವರರು ಲಿಂಗಾಯತರ ಮನೆದೇವತೆ ಮಾತ್ರವೇ ಅಲ್ಲದೆ ಅಸಂಖ್ಯ ಕುರುಬರು, ಒಕ್ಕಲಿಗರು ಮತ್ತು ಇತರ ಹಿಂದುಳಿದ ವರ್ಗಗಳ ಮನೆದೈವವೂ ಹೌದು.

-ಡಾ. ಮೈಸಿ ಪಾಟೀಲ್, ಡಾ. ಎಂ.ಎಸ್.ಮಹಲಿಂಗಪ್ಪ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.