ADVERTISEMENT

ವಾಚಕರ ವಾಣಿ | ಆನ್‌ಲೈನ್ ಮಾಡಿ, ಮರ ಉಳಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ನವೆಂಬರ್ 2021, 20:15 IST
Last Updated 26 ನವೆಂಬರ್ 2021, 20:15 IST

ಬಂಗಾರದ ಬೆಲೆಯಂತೆ ಕಾಗದದ ಬೆಲೆಯಲ್ಲಿ ಪ್ರತಿನಿತ್ಯ ಏರಿಕೆ- ಇಳಿಕೆ ಉಂಟಾಗುತ್ತದೆ. ಇದು ಆಶ್ಚರ್ಯ ಎನಿಸಿದರೂ ಸತ್ಯ. ಇತ್ತೀಚೆಗೆ ಸಹೋದರನ ವಿವಾಹ ಆಮಂತ್ರಣ ಪತ್ರಿಕೆಯನ್ನು ಮಾಡಿಸುವ ಸಂದರ್ಭದಲ್ಲಿ ಈ ವಿಚಾರ ತಿಳಿಯಿತು. ರಾಜ್ಯದಲ್ಲಿ ಈಗ ಪದವೀಧರ ಕ್ಷೇತ್ರಕ್ಕೆ ಮತದಾರರ ನೋಂದಣಿ ನಡೆಯುತ್ತಿದೆ. ಹೊಸ ಮತದಾರರಲ್ಲದೆ, ಈ‌ಗಾಗಲೇ ನೋಂದಣಿಯಾಗಿರುವ ಮತದಾರರು ಸಹ‌ ನೋಂದಣಿಗಾಗಿ ಹೊಸದಾಗಿ ಅರ್ಜಿ ತುಂಬಬೇಕಾಗಿದೆ. ಇದಕ್ಕಾಗಿ ಕೋಟ್ಯಂತರ ಅರ್ಜಿಗಳನ್ನು ಮುದ್ರಿಸಿ ವಿತರಿಸಲಾಗಿದೆ. ಇದಕ್ಕಾಗಿ ಟನ್‌ಗಟ್ಟಲೆ ಅಮೂಲ್ಯವಾದ ಕಾಗದವನ್ನು ವ್ಯರ್ಥ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಮತದಾರರ ನೋಂದಣಿಯನ್ನು ಆನ್‌ಲೈನ್ ಮಾಡಿದಲ್ಲಿ ಅಮೂಲ್ಯವಾದ ಕಾಗದ ಉಳಿಯುತ್ತದೆ.

ದುರಂತವೆಂದರೆ, ಪದವೀಧರರ ನೋಂದಣಿಗೆ ಅರ್ಜಿ ನಮೂನೆ ಮಾತ್ರ ಆನ್‌ಲೈನ್‌ನಲ್ಲಿ ಲಭ್ಯವಿದ್ದು ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದು ತುಂಬಿ ಸಲ್ಲಿಸಬೇಕು. ಸರ್ಕಾರ ಈ ಕೂಡಲೇ ಸೂಕ್ತ‌ ನಿಯಮ ಜಾರಿಗೆ ತಂದು, ನೋಂದಣಿಯನ್ನು ಆನ್‌ಲೈನ್ ಮಾಡಿ, ಪ್ರತಿಬಾರಿ ಟನ್‌ಗಟ್ಟಲೆ ಅಮೂಲ್ಯ ಕಾಗದ ವ್ಯರ್ಥವಾಗದಂತೆ ನಿಯಮವನ್ನು ಜಾರಿಗೊಳಿಸಬೇಕು.

ಎಸ್.ರವಿ,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.