ADVERTISEMENT

ಬಾಕಿ ವೇತನ: ಅರ್ಥವಿಲ್ಲದ ಸ್ಪಷ್ಟೀಕರಣ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 20:15 IST
Last Updated 2 ಜೂನ್ 2020, 20:15 IST

ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾದ ಕೆಲವೇ ಕೆಲವು ಪ್ರಾಧ್ಯಾಪಕರಿಗೆ 2006ರಿಂದ 2008ರವರೆಗಿನ ಬಾಕಿ ವೇತನವನ್ನು ಪಾವತಿಸದೆ, 2016ರಿಂದ 2019ರವರೆಗಿನ ವೇತನ ಬಾಕಿ ಪಾವತಿಸಿರುವುದರ ಔಚಿತ್ಯದ ಬಗ್ಗೆ ವರದಿಯಾಗಿದೆ (ಪ್ರ.ವಾ., ಮೇ 24).

‘ಈ ಹಿಂದೆ ಕೆಲವರಿಗೆ ಹೆಚ್ಚುವರಿಯಾಗಿ ಪಾವತಿಸಿರುವ ಸಮಸ್ಯೆಗಳು ಎದುರಾಗಿದ್ದವು. ಅವುಗಳನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ. ನಂತರ, ಪಾವತಿಯಾಗದಿರುವ ಕೆಲವು ನಿವೃತ್ತ ಪ್ರಾಧ್ಯಾಪಕರಿಗೆ ಹಿಂಬಾಕಿ ಪಾವತಿಸಲಾಗುವುದು’ ಎಂದು ಇಲಾಖೆಯ ಆಯುಕ್ತರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಇದು ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ ಹಾಕಿದ ಹಾಗಿದೆ. ಹೆಚ್ಚುವರಿ ಪಾವತಿಯಾಗಿರುವುದಕ್ಕೆ ಇಲಾಖೆ ಹೊಣೆಯೇ ಹೊರತು ಬಾಕಿ ವೇತನ ಪಡೆಯಬೇಕಾದ ನಿವೃತ್ತ ಪ್ರಾಧ್ಯಾಪಕರು ಹೇಗೆ ಕಾರಣರಾಗುತ್ತಾರೆ? ಹೆಚ್ಚುವರಿ ಪಾವತಿಯಾಗಿ ದ್ದರೆ ಅದನ್ನು ವಸೂಲು ಮಾಡಬೇಕಾಗಿರುತ್ತದೆ.

ADVERTISEMENT

ಸಾಮಾನ್ಯವಾಗಿ ವೇತನ ಹಿಂಬಾಕಿಯನ್ನು ನಿವೃತ್ತಿಯಾದವರಿಗೆ ಆದ್ಯತೆಯ ಮೇರೆಗೆ ಕೊಡಬೇಕು. ಹಾಗಾಗಿ 2006ರಿಂದ 2008ರ ಬಾಕಿ ವೇತನವನ್ನು ಮೊದಲು ಪಾವತಿಸಿ, ನಂತರ 2016ರಿಂದ 2019ರ ಬಾಕಿ ವೇತನವನ್ನು ಪಾವತಿಸಬೇಕಾದುದು ಇಲಾಖೆಯ ನ್ಯಾಯಯುತವಾದ ಜವಾಬ್ದಾರಿಯಾಗಿರುತ್ತದೆ. ಉನ್ನತ ಶಿಕ್ಷಣ ಸಚಿವರು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು.

-ಡಾ. ಎ.ತಿಮ್ಮೇಗೌಡ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.