ADVERTISEMENT

ವಾಚಕರ ವಾಣಿ: ಇಂಧನ ಬೆಲೆ ಏರಿಕೆಯಿಂದ ಹಣದುಬ್ಬರದ ಭೀತಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 17:32 IST
Last Updated 26 ಫೆಬ್ರುವರಿ 2021, 17:32 IST

ಪೆಟ್ರೋಲ್ ಮತ್ತು ಡೀಸೆಲ್ ದೈನಂದಿನ ಅಗತ್ಯಗಳಾಗಿವೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಇಂಧನದ ಮೇಲೆ ಸರ್ಕಾರ ವಿಧಿಸುತ್ತಿರುವ ಅಧಿಕ ಸುಂಕವು ಇವುಗಳ ಬೆಲೆ ಏರಿಕೆಗೆ ಪ್ರಮುಖ ಕಾರಣ. ಈ ಬೆಲೆ ಏರಿಕೆಯು ಆರ್ಥಿಕತೆಯಲ್ಲಿ ಇತರ ಸರಕು ಮತ್ತು ಸೇವೆಗಳ ಬೆಲೆ ಏರಿಕೆಗೆ ಕಾರಣವಾಗುವುದರ ಮೂಲಕ ಹಣದುಬ್ಬರವನ್ನು ಸೃಷ್ಟಿಸುವ ಅಪಾಯವಿದೆ.

ಆರ್ಥಿಕತೆ ಈಗಷ್ಟೇ ಚೇತರಿಕೆ ಕಾಣುತ್ತಿದೆ. ಅದು ವೇಗ ಪಡೆಯಬೇಕಾದರೆ ಜನರ ಕೈಯಲ್ಲಿ ಹಣ ಓಡಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರದ ಪರಿಣಾಮವಾಗಿ ಜನರ ಜೇಬು ಖಾಲಿಯಾದರೆ ವಸ್ತುಗಳ ಬೇಡಿಕೆ ಕುಸಿಯುತ್ತದೆ. ಆರ್‌ಬಿಐ ಲೆಕ್ಕಾಚಾರವನ್ನು ತಲೆಕೆಳಗಾಗಿಸುತ್ತದೆ. ಹಣದುಬ್ಬರದಿಂದ ಬಡವರು ಇನ್ನಷ್ಟು ಬಡವರಾಗುತ್ತಲೇ ಹೋಗುವ ಅಪಾಯ ಇದ್ದೇ ಇರುತ್ತದೆ.

ನಿರ್ಮಲ ನಾಗೇಶ್, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.