ADVERTISEMENT

ಮಾದಕ ವಸ್ತು: ಜಾಗೃತಿ ಕಾರ್ಯಕ್ರಮ ಸದಾ ಇರಲಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

ವಿಶ್ವ ತಂಬಾಕು ರಹಿತ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಮಾದಕ ವಸ್ತುಗಳ ವಿರುದ್ಧದ ಅಭಿಯಾನವನ್ನು ವರ್ಷಕ್ಕೊಮ್ಮೆ ಮಾತ್ರ ಆಚರಿಸಿದರೆ ಸಾಲದು. ಇವುಗಳ ವಿರುದ್ಧ ಸದಾ ಜಾಗೃತಿ ಅಗತ್ಯ.

ಸಿಗರೇಟು, ಗುಟ್ಕಾ, ಗಾಂಜಾದಂತಹವುಗಳ ಸೇವನೆಯಿಂದ ಹಣ ನಷ್ಟವಾಗುತ್ತದೆ, ಆರೋಗ್ಯವೂ ಹಾಳಾಗುತ್ತದೆ. ಸಮಾಜದಲ್ಲಿ ಅಶಾಂತಿ ಸಹ ಉಂಟಾಗುತ್ತದೆ. ಕೆಲ ಯುವಕರು ಮಾದಕ ವಸ್ತುವಿನ ಚಟ ಹೊಂದಿರುತ್ತಾರೆ. ಅದರಿಂದ ಆಗುವ ಕೆಟ್ಟ ಪರಿಣಾಮವನ್ನು ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪೋಷಕರು ಮಕ್ಕಳಿಗೆ ತಿಳಿಸಿ ಹೇಳಬೇಕು.

ಸೇವಾ ಸಂಸ್ಥೆಗಳು ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ADVERTISEMENT

-ಸದಾನಂದ ಹೆಗಡೆಕಟ್ಟೆ,ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.