ADVERTISEMENT

ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 6:30 IST
Last Updated 10 ಅಕ್ಟೋಬರ್ 2025, 6:30 IST
   

ಬೆಳಕಿನ ಹಬ್ಬ ದೀಪಾವಳಿಯನ್ನು ದೀಪದ ಜೊತೆ ಆಚರಿಸುವುದು ಸಂಪ್ರದಾಯ. ಹೆಸರೇ ಹೇಳುವಂತೆ ದೀಪವಾಳಿ ದೀಪಗಳಿಂದ ಆಚರಣೆ ಮಾಡುವ ಹಬ್ಬವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಮನೆಯ ಮುಂದೆ ಗೂಡು ದೀಪವನ್ನು ಇಡುವುದನ್ನು ನಾವು ನೀವೆಲ್ಲ ಗಮನಿಸಿರುತ್ತೇವೆ. ಹಾಗಿದ್ದರೆ, ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಗೂಡು ದೀಪ ತಯಾರಿಸುವುದು ಹೇಗೆ ಎಂಬ ವಿಧಾನ ಇಲ್ಲಿದೆ ನೋಡಿ.

ದೀಪಾವಳಿಯಲ್ಲಿ ಮನೆಯ ಮುಂದೆ ಅಥವಾ ಬಾಲ್ಕನಿಯಲ್ಲಿ ಗೂಡು ದೀಪಗಳನ್ನು ತೂಗು ಹಾಕುವುದರಿಂದ ಮನೆಯ ಅಂದ ಹೆಚ್ಚುತ್ತದೆ. ಕಾಗದದಿಂದ ತಯಾರಿಸುವ ಗೂಡುದೀಪ ಮನೆ ಮಂದಿಗೆ ಸೊಗಸಾದ ಅನುಭವ ನೀಡುತ್ತದೆ.

ಮನೆಯಲ್ಲೇ ಗೂಡುದೀಪವನ್ನು ತಯಾರಿಸುವುದು ಹೇಗೆ?

ADVERTISEMENT

ಬೇಕಾದ ವಸ್ತುಗಳು:

  • ಬಣ್ಣದ ಕಾಗದಗಳು (ಎ4 ಅಥವಾ ಅದಕ್ಕಿಂತ ಡೊಡ್ಡ ಅಳತೆಯದು)

  • ಕತ್ತರಿ

  • ಗಮ್ ಅಥವಾ ಡಬಲ್-ಸೈಡೆಡ್ ಟೇಪ್

  • ಪೆನ್ಸಿಲ್  ಮತ್ತು ರೂಲರ್

  • ಥ್ರೆಡ್ (ದಾರ)

  • ಎಲ್‌ಇಡಿ ಲೈಟ್‌

  • ಮಿನುಗು ಅಥವಾ ಬಣ್ಣದ ಕಾಗಜಗಳು

ಕಾಗದದ ಗೂಡುದೀಪ ತಯಾರಿಸುವ ಹಂತಗಳು ಹೀಗಿವೆ.

  • ಮೊದಲು ನಿಮ್ಮ ಇಷ್ಟದ ಬಣ್ಣದ ಕಾಗದವನ್ನು ತೆಗೆದುಕೊಳ್ಳಿ. ಕೆಂಪು, ನೀಲಿ, ಚಿನ್ನದ ಬಣ್ಣ ಅಥವಾ ಗುಲಾಬಿ ಬಣ್ಣದ ಕಾಗದವು ಹೆಚ್ಚು ಅಂದವಾಗಿ ಕಾಣುತ್ತದೆ. 

  • ತೆಗೆದುಕೊಂಡ ಕಾಗದದಲ್ಲಿ, ಕಾಗದದ ಅರ್ಧ ಭಾಗವನ್ನು ಉದ್ದವಾಗಿ ಮಡಿಚಿ.

  • ಕಾಗದ ಮಡಿಚಿದ ಅಂಚಿನಿಂದ ನೇರವಾದ ರೇಖೆಯನ್ನು ಎಳೆಯಿರಿ. ಅದರ ಎದುರು ಒಂದು ಇಂಚು ಜಾಗ ಬೀಡಬೇಕು. ಅಂಚುಗಳನ್ನು ಕತ್ತರಿಸದೆ ರೇಖೆ ಎಳೆದಿರುವ ಭಾಗವನ್ನು ಕತ್ತರಿಸಿ.

  • ನಂತರ ಕಾಗದವನ್ನು ಬಿಚ್ಚಿ ಸಿಲಿಂಡರ್‌ ಆಕಾರವಾಗಿ ಸುತ್ತಿಕೊಳ್ಳಬೇಕು. ಗಮ್‌ನಿಂದ ತುದಿಯನ್ನು ಅಂಟಿಸಿದರೂ ಸೂಕ್ತ.

  • ಕಾಗದವನ್ನು ಮೇಲಿನಿಂದ ನಿಧಾನವಾಗಿ ಒತ್ತಿದರೇ ಸಿಲಿಂಡರ್‌ ಲ್ಯಾಂಟರ್ನ್ ಮಾದರಿಯಾಗಿ ರೂಪುಗೊಳ್ಳುತ್ತದೆ. ಅದರ  ಮೇಲೆ ಕಾಗದದಿಂದ ನೇತು ಹಾಕಲು ಹಿಡಿಯನ್ನು ಮಾಡಿ. 

  • ಬಳಿಕ ಅದಕ್ಕೆ ಮಿನುಗು ಹಾಗೂ ಕಾಗಜಗಳಿಂದ ಅಲಂಕಾರ ಮಾಡಿ, ಒಂದು ಎಲ್‌ಇಡಿ ಬಲ್ಬ್‌ ಅದರ ಒಳಕ್ಕೆ ಹಾಕಿ. ಈಗ ಗೂಡುದೀಪ ಸಿದ್ದವಾಯಿತು. ಎಲ್ಲಿ ಬೇಕೋ ಅಲ್ಲಿ ಗೂಡುದೀಪವನ್ನು ನೇತು ಹಾಕಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.