ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು "ಸಾಂತ್ವನ ಯೋಜನೆ"ಯನ್ನು ಪ್ರಾರಂಭಿಸಿದೆ.
ನೈಸರ್ಗಿಕ ವಿಕೋಪ ಮತ್ತು ಕೋಮು ಹಿಂಸಾಚಾರದಿಂದಾಗಿ ಮನೆಗಳು ಮತ್ತು ಅಂಗಡಿಗಳು ನಾಶವಾದರೆ ಅಂತಹ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ.
ಅಲ್ಪಸಂಖ್ಯಾತರಿಗೆ ಈ ಯೋಜನೆಯಡಿಯಲ್ಲಿ ₹5 ಲಕ್ಷ ನೀಡಲಿದ್ದು, ಶೇ 50 ರಷ್ಟು ಸಾಲದ ರೂಪದಲ್ಲಿ ಹಾಗೂ ಶೇ 50 ಸಬ್ಸಿಡಿಯಲ್ಲಿ ನೀಡಲಾಗುತ್ತದೆ.
ಅರ್ಹತೆಗಳು
ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು.
ಅರ್ಜಿದಾರರು 18 – 55 ವಯಸ್ಸಿನವರಾಗಿರಬೇಕು
ಎಲ್ಲಾ ಮೂಲಗಳಿಂದ ಕುಟುಂಬದ ಆದಾಯವು ₹8ಲಕ್ಷಕ್ಕಿಂತ ಹೆಚ್ಚಿರಬಾರದು
ಅರ್ಜಿದಾರರ ಕುಟುಂಬದ ಸದಸ್ಯರು ಕೇಂದ್ರ – ರಾಜ್ಯ ಸರ್ಕಾರದ ಉದ್ಯೋಗಿಗಳಾಗಿರಬಾರದು
ಅರ್ಜಿದಾರರ ಕುಟುಂಬ ಸದಸ್ಯರು ಐದು ವರ್ಷಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯವನ್ನು ಪಡೆದಿರಬಾರದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಹಂತ 1: ಅರ್ಜಿದಾರರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ https://kmdconline.karnataka.gov.in/Portal/login ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ‘ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ‘ ಎಂಬ ಗುಂಡಿಯನ್ನು ಒತ್ತಿ. ಬಳಿಕ ‘ಮೊಬೈಲ್ ಸಂಖ್ಯೆ‘ ನಮೂದಿಸಿದ ಬಳಿಕ "ಸಲ್ಲಿಸು" ಗುಂಡಿಯನ್ನು ಒತ್ತಿ.
ಹಂತ 3: "ಆಧಾರ್ ಸಂಖ್ಯೆ" ನಮೂದಿಸಿದ ಬಳಿಕ "ಕ್ಯಾಪ್ಚಾ" ಅನ್ನು ಭರ್ತಿ ಮಾಡಿದ ನಂತರ "ಮುಂದೆ" ಆಯ್ಕೆ ಮಾಡಿ.
ಹಂತ 4: ಅರ್ಜಿದಾರರು ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.
ಹಂತ 5: ಓಟಿಪಿ ನಮೂದಿಸಿದ ಬಳಿಕ "ಮುಂದುವರಿಸಿ" ಆಯ್ಕೆಮಾಡಿ.
ಹಂತ 6: "ಸಿಖ್ಲಿಗರ್ ಸಮುದಾಯ ಅಭಿವೃದ್ಧಿ ಯೋಜನೆ" ಯನ್ನು ಆಯ್ಕೆಮಾಡಿ. ಕೇಳಿದ ವಿವರಗಳನ್ನು ಭರ್ತಿ ಮಾಡಿ.
ಹಂತ 7: "ಮುಂದಿನದು" ಆಯ್ಕೆಮಾಡಿ. ವಿಳಾಸದ ವಿವರವನ್ನು ಭರ್ತಿ ಮಾಡಿದ ಬಳಿಕ "ಮುಂದಿನದು" ಆಯ್ಕೆಮಾಡಿ.
ಹಂತ 8: ನಿಖರ ಗಾತ್ರದಲ್ಲಿ ಕೇಳಿರುವ ದಾಖಲೆಗಳನ್ನು ನಮೂದಿಸಿ.
ಹಂತ 9: "ಮುಂದುವರಿಸಿ" ಎಂಬ ಗುಂಡಿಯನ್ನು ಒತ್ತಿದ ನಂತರ, "ಅರ್ಜಿ ಸಲ್ಲಿಸಿ" ಆಯ್ಕೆ ಮಾಡಿ ಬಳಿಕ ಅರ್ಜಿ ಐಡಿ ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.