ಕಾಲ್ಪನಿಕ ಚಿತ್ರ
ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಎಂಬುದು ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ದಿಂದ ಪ್ರಾರಂಭಿಸಿ, ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.
ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಎಂಬುದು ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ದಿಂದ ಪ್ರಾರಂಭಿಸಿ, ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.
5 ವರ್ಷಗಳ ಅವಧಿಗೆ ಹಣವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆ ಅಡಿಯಲ್ಲಿ ಆವರ್ತ ಠೇವಣಿ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹಾಗೂ ಇಡಬಹುದಾದ ಠೇವಣಿ, ಹಣ ಹಿಂಪಡೆಯಲು ಅನುಸರಿಸಬೇಕಾದ ನಿಯಮಗಳೇನು ಎಂಬ ಮಾಹಿತಿ ಇಲ್ಲಿದೆ.
ಈ ಯೋಜನೆ ಪಡೆಯಲು ಬೇಕಾದ ಅರ್ಹತೆಗಳೇನು?
ಭಾರತದ ನಾಗರಿಕನಾಗಿರಬೇಕು
ಖಾತೆಯ ಮಾಲೀಕತ್ವ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತ
ಜಂಟಿ ಖಾತೆ (ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸಮಾನ ಮಾಲೀಕತ್ವದ ಹಕ್ಕುಗಳೊಂದಿಗೆ ಒಟ್ಟಾಗಿ ತೆರೆಯುವ ಮತ್ತು ನಿರ್ವಹಿಸುವ ಬ್ಯಾಂಕ್ ಖಾತೆಯಾಗಿದೆ)
ಮುಂಗಡ ಠೇವಣಿ
ವ್ಯಕ್ತಿಯು 5 ವರ್ಷಗಳವರೆಗಿನ ಯಾವುದೇ ಅವಧಿಗೆ ಮುಂಗಡ ಠೇವಣಿ ಮಾಡಬಹುದು.
ಸಾಲ ಸೌಲಭ್ಯ ಪಡೆಯಬಹುದಾ?
ಖಾತೆಯು ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸಿದ ನಂತರ, ಠೇವಣಿದಾರರು ಖಾತೆಗಳಲ್ಲಿ ಶೇ. 50ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.
ಸಾಲವನ್ನು ಒಂದೇ ಬಾರಿಗೆ ಅಥವಾ ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿಸಬಹುದು.
ಈ ಯೋಜನೆಯ ನಿಯಮಗಳ ಪ್ರಕಾರ, ಸಾಲದ ಖಾತೆಗೆ ಅನ್ವಯವಾಗುವ ಬಡ್ಡಿದರಕ್ಕಿಂತ 2% ದರದಲ್ಲಿ ಸರಳ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಖಾತೆಯನ್ನು ಮುಚ್ಚುವವರೆಗೆ ಸಾಲವನ್ನು ಮರುಪಾವತಿಸದಿದ್ದರೆ, ಬಾಕಿ ಇರುವ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ.
ಖಾತೆಯನ್ನು ಮುಕ್ತಾಯಗೊಳಿಸುವುದು ಹೇಗೆ?
ಖಾತೆ ತೆರೆದ ದಿನಾಂಕದಿಂದ 3 ವರ್ಷಗಳ ನಂತರ ಆರ್‌ಡಿ ಖಾತೆಯನ್ನು ಅವಧಿಪೂರ್ವವಾಗಿ ಮುಚ್ಚಬಹುದು.
ಅವಧಿ ಮುಗಿಯುವ ಒಂದು ದಿನ ಮೊದಲು ಖಾತೆಯನ್ನು ಅಕಾಲಿಕವಾಗಿ ಮುಚ್ಚಿದರೆ, ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿದರ ಅನ್ವಯವಾಗುತ್ತದೆ.
ಮುಂಗಡ ಠೇವಣಿಗಳನ್ನು ಪಡೆದ ಅವಧಿಯವರೆಗೆ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿಸಲಾಗುವುದಿಲ್ಲ.
ಖಾತೆಯ ಮುಕ್ತಾಯ ಅವಧಿ ಎಷ್ಟು?
ಖಾತೆ ಆರಂಭದ ದಿನಾಂಕದಿಂದ 5 ವರ್ಷಗಳ ಅವಧಿಯೊಳಗೆ ಖಾತೆಯನ್ನು ಮುಚ್ಚಬಹುದು.
ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಖಾತೆಯನ್ನು ಇನ್ನೂ ಹೆಚ್ಚುವರಿಯಾಗಿ 5 ವರ್ಷಗಳವರೆಗೆ ವಿಸ್ತರಿಸಬಹುದು.
ಆರ್‌ಡಿ ಖಾತೆಯನ್ನು (ಆವರ್ತ ಠೇವಣಿ) ಮುಕ್ತಾಯ ದಿನಾಂಕದಿಂದ 5 ವರ್ಷಗಳವರೆಗೆ ಠೇವಣಿ ಇಲ್ಲದೆ ಉಳಿಸಿಕೊಳ್ಳಬಹುದು.
ಖಾತೆದಾರ ಮರಣ ನಂತರ..?
ನಾಮಿನಿ ಅಥವಾ ಹಕ್ಕುದಾರರ ಮರಣದ ನಂತರ, ಆರ್‌ಡಿ ಖಾತೆಯ ಉಳಿದಿರುವ ಹಣವನ್ನು ಪಡೆಯಲು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಹಕ್ಕು ಸಲ್ಲಿಸಬಹುದು.
ಕೆಲವು ಸಂದರ್ಭಗಳಲ್ಲಿ ಠೇವಣಿದಾರರ ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಯಿಸಿದ ನಂತರ ಅವರು ಆರ್‌ಡಿ ಖಾತೆಯನ್ನು ಮುಕ್ತಾಯಗೊಳ್ಳುವವರೆಗೆ ಮುಂದುವರಿಸಬಹುದು.
ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆಯ ಅಧಿಕೃತ ಅಂತರ್ಜಾಲ ತಾಣ ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂರ್ಪಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.