ADVERTISEMENT

ಆಸೀಸ್‌ ಬಳಗಕ್ಕೆ ಅಮೋಘ ಜಯ

ಕ್ರಿಕೆಟ್‌: ಜಾನ್ಸನ್‌, ಹ್ಯಾರಿಸ್‌ ಮಾರಕ ದಾಳಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2014, 19:30 IST
Last Updated 15 ಫೆಬ್ರುವರಿ 2014, 19:30 IST
ವಿಕೆಟ್‌ ಪಡೆದ ಖುಷಿ... ಸೆಂಚೂರಿಯನ್‌ನ ಸೂಪರ್‌ ಸ್ಪೋರ್ಟ್‌್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌್ ಕ್ರಿಕೆಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ರ್‍್ಯಾನ್‌ ಮೆಕ್‌ಲಾರೆನ್‌ ವಿಕೆಟ್‌ ಪಡೆದಾಗ ಆಸ್ಟ್ರೇಲಿಯಾ ತಂಡದ ಮಿಷೆಲ್‌ ಜಾನ್ಸನ್‌್ ತಂಡದ ಸಹ ಆಟಗಾರರ ಜೊತೆ ಸಂಭ್ರಮಿಸಿದ ಕ್ಷಣ 	–ಎಎಫ್‌ಪಿ ಚಿತ್ರ
ವಿಕೆಟ್‌ ಪಡೆದ ಖುಷಿ... ಸೆಂಚೂರಿಯನ್‌ನ ಸೂಪರ್‌ ಸ್ಪೋರ್ಟ್‌್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌್ ಕ್ರಿಕೆಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ರ್‍್ಯಾನ್‌ ಮೆಕ್‌ಲಾರೆನ್‌ ವಿಕೆಟ್‌ ಪಡೆದಾಗ ಆಸ್ಟ್ರೇಲಿಯಾ ತಂಡದ ಮಿಷೆಲ್‌ ಜಾನ್ಸನ್‌್ ತಂಡದ ಸಹ ಆಟಗಾರರ ಜೊತೆ ಸಂಭ್ರಮಿಸಿದ ಕ್ಷಣ –ಎಎಫ್‌ಪಿ ಚಿತ್ರ   

ಸೆಂಚೂರಿಯನ್‌ (ಎಎಫ್‌ಪಿ): ಮಿಷೆಲ್‌ ಜಾನ್ಸನ್ (59ಕ್ಕೆ5) ಸೇರಿದಂತೆ ಇತರ ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 281 ರನ್‌ಗಳ ಅಮೋಘ ಜಯ ದಾಖಲಿಸಿದೆ.

ಸೂಪರ್‌ಸ್ಪೋರ್ಟ್  ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಗೆಲುವಿಗೆ 482 ರನ್‌ಗಳ ಬೃಹತ್‌ ಗುರಿ ಪಡೆದ  ದ.ಆಫ್ರಿಕಾ  ನಾಲ್ಕನೇ ದಿನವಾದ ಶನಿವಾರ ದ್ವಿತೀಯ ಇನಿಂಗ್ಸ್‌ನಲ್ಲಿ 59.4 ಓವರ್‌ಗಳಲ್ಲಿ  200ರನ್‌ಗಳಿಗೆ ಆಲೌಟಾಯಿತು.

479 ರನ್‌ಗಳ ಭಾರಿ ಮುನ್ನಡೆಯೊಂದಿಗೆ  ದಿನದಾಟ ಆರಂಭಿಸಿದ ಆಸೀಸ್‌ ಈ ಮೊತ್ತಕ್ಕೆ 2 ರನ್‌ ಸೆೇರಿಸುವಷ್ಟರಲ್ಲಿ  ಶಾನ್‌ ಮಾರ್ಷ್‌ ವಿಕೆಟ್‌ ಕಳೆದುಕೊಂಡಿತು. ಆಗ  ನಾಯಕ ಮೈಕಲ್‌ ಕ್ಲಾರ್ಕ್‌ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡು ಎದುರಾಳಿ  ಬಳಗದ  ಗೆಲುವಿಗೆ 482ರನ್‌ ಗುರಿ ನೀಡಿದರು.

ಬೃಹತ್‌ ಮೊತ್ತವನ್ನು  ಬೆನ್ನಟ್ಟಿದ ಹರಿಣಗಳ ಬಳಗ ಮತ್ತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಹೀನಾಯ ಸೋಲು ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ 91ರನ್‌ ಗಳಿಸಿದ್ದ ಎಬಿ ಡಿವಿಲಿಯರ್ಸ್‌ (48; 90ಎ, 5 ಬೌಂ) ಮಾತ್ರ ಅಲ್ಪ ಹೋರಾಟ ನಡೆಸಿದರು. ಆದರೆ ಇತರ ಆಟಗಾರರಿಂದ   ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.

ಮತ್ತೆ ಮಿಂಚಿದ ಜಾನ್ಸನ್‌
ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ಪಡೆದು ದಕ್ಷಿಣ ಆಫ್ರಿಕಾ ತಂಡಕ್ಕೆ ಇನ್ನಿಲ್ಲದಂತೆ ಕಾಡಿದ್ದ ಮಿಷೆಲ್‌ ಜಾನ್ಸನ್‌ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದರು. ಎರಡೂ ಇನಿಂಗ್ಸ್‌ ಸೇರಿ ಒಟ್ಟು 12 ವಿಕೆಟ್‌ ಉರುಳಿಸಿದ ಮಿಷೆಲ್‌ ದಾಳಿಯ ನೆರವಿನಿಂದ ಕಾಂಗರೂ ನಾಡಿನ ಬಳಗಕ್ಕೆ ಗೆಲುವು ಸುಲಭವಾಯಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 397 ಮತ್ತು ಎರಡನೇ ಇನಿಂಗ್ಸ್‌ 72.2 ಓವರ್‌ಗಳಲ್ಲಿ 4 ವಿಕೆಟ್‌ಗೆ 290 ಡಿಕ್ಲೇರ್ಡ್‌. ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌, 206 ಮತ್ತು 59.4 ಓವರ್‌ಗಳಲ್ಲಿ 200 ( ಹಾಶೀಮ್‌ ಆಮ್ಲಾ 35, ಎಬಿ ಡಿವಿಲಿಯರ್ಸ್‌ 48, ವರ್ನಾನ್ ಫಿಲ್ಯಾಂಡರ್‌ ಅಜೇಯ 26; ಮಿಷೆಲ್‌ ಜಾನ್ಸನ್‌ 59ಕ್ಕೆ5, ರ್‍್ಯಾನ್‌ ಹ್ಯಾರಿಸ್ 35ಕ್ಕೆ2, ಪೀಟರ್‌ ಸಿಡ್ಲ್‌ 55ಕ್ಕೆ2)
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 281ರನ್‌ ಜಯ. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.
  ಪಂದ್ಯ ಶ್ರೇಷ್ಠ: ಮಿಷೆಲ್‌ ಜಾನ್ಸನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.