ADVERTISEMENT

ಹೆಸರು ಬಹಿರಂಗಗೊಳಿಸದಂತೆ ಮನವಿ

ಸುಪ್ರೀಂ ಕೋರ್ಟ್‌ಗೆ ಬಿಸಿಸಿಐ ಕೋರಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 20:03 IST
Last Updated 6 ಮಾರ್ಚ್ 2014, 20:03 IST

ನವದೆಹಲಿ:  ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಸಮಿತಿ ನೀಡಿರುವ ವರದಿಯಲ್ಲಿ ಹಾಲಿ ಆಟಗಾರರ ಹೆಸರು ಇದ್ದರೆ ಬಹಿರಂಗ ಪಡಿಸದಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಬೆಟ್ಟಿಂಗ್‌ ಮತ್ತು ಫಿಕ್ಸಿಂಗ್‌ ಸಂಬಂಧ ಮುದ್ಗಲ್‌ ಸಮಿತಿ ಸಲ್ಲಿಸಿರುವ ವರದಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌್ ಕೈಗೆತ್ತಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮನವಿ ಮಾಡಿದೆ. ಈ ವರದಿಯಲ್ಲಿ ಭಾರತ ತಂಡದ ಆರು ಆಟಗಾರರ ಹೆಸರು ಇದೆ ಎಂದು ತಿಳಿದು ಬಂದಿದೆ.

‘ಒಂದು ವೇಳೆ  ಹೆಸರು ಬಹಿರಂಗಗೊಂಡರೆ ಆಟಗಾರರ ಕ್ರೀಡಾ ಜೀವನಕ್ಕೆ ಕುತ್ತು ಬರಲಿದೆ. ಕ್ರೀಡೆಗೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ಹಾಲಿ ಆಟಗಾರರ ಹೆಸರನ್ನು ಬಹಿರಂಗ ಮಾಡಬಾರದು’ ಎಂದು ಬಿಸಿಸಿಐ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.