ಮುಂಬೈ: ಇದೇ 29ರಂದು ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯಕ್ಕೆ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಶೇಷ ಅತಿಥಿಯಾಗಿ ಬರಲಿದ್ದಾರೆ. ಆ ದಿನ ಅವರು ಇಲ್ಲಿರುವ ಬೃಹತ್ ಘಂಟೆಯನ್ನು ಬಾರಿಸುವ ಮೂಲಕ ಪಂದ್ಯವನ್ನು ಉದ್ಘಾಟಿಸಲಿದ್ದಾರೆ.
ಐದು ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯ ಇದಾಗಿದೆ. ಈ ಪಂದ್ಯವನ್ನು ವಾಂಖೆಡೆ ಕ್ರೀಡಾಂಗಣದಿಂದ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಸಚಿನ್ ಅವರು 15ನೇ ವರ್ಷದವರಾಗಿದ್ದಾಗಲೇ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಸದಸ್ಯತ್ವ ನೀಡಲಾಗಿತ್ತು. ಇದೀಗ ಅವರನ್ನು ಆಹ್ವಾನಿಸಲು ಸಂತಸವಾಗುತ್ತದೆ ಎಂದು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಕ್ರಿಕೆಟ್ ಕೆಫೆ ವೆಬ್‌ಸೈಟ್‌ಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.