ADVERTISEMENT

ರಣಜಿ ಕ್ರಿಕೆಟ್: ಬಿನ್ನಿಗೆ ಕೊಕ್, ದೇವದತ್‌ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 20:15 IST
Last Updated 26 ನವೆಂಬರ್ 2018, 20:15 IST
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್   

ಬೆಂಗಳೂರು: ಸತತ ವೈಫಲ್ಯ ಅನುಭವಿಸಿರುವ ಆಲ್‌ರೌಂಡರ್ ಸ್ಟುವರ್ಟ್‌ ಬಿನ್ನಿ ಅವರನ್ನು ಕರ್ನಾಟಕ ಕ್ರಿಕೆಟ್ ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಯುವ ಆಟಗಾರ ದೇವದತ್ತ ಪಡಿಕ್ಕಲ್ ಅವರನ್ನು ಸೇರ್ಪಡೆ ಮಾಡಲಾಗಿದೆ.

ಮೈಸೂರಿನಲ್ಲಿ ಬುಧವಾರದಿಂದ ಮೂರನೇ ರಣಜಿ ಪಂದ್ಯ ನಡೆಯಲಿದೆ. ರಾಜ್ಯ ತಂಡವು ಈ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ. ಈಚೆಗೆ ಬೆಳಗಾವಿಯಲ್ಲಿ ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆರ್. ವಿನಯಕುಮಾರ್ ಆಡಿರಲಿಲ್ಲ. ಶ್ರೇಯಸ್ ಗೋಪಾಲ್ ಸಾರಥ್ಯ ವಹಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಇದೇ ಮೊದಲ ಬಾರಿಗೆ ರಾಜ್ಯ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.

ತಂಡ ಇಂತಿದೆ:ಆರ್. ವಿನಯಕುಮಾರ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಅಭಿಷೇಕ್ ರೆಡ್ಡಿ, ದೇವದತ್ತ ಪಡಿಕ್ಕಲ್, ಡಿ. ನಿಶ್ಚಲ್, ಕೆ.ವಿ. ಸಿದ್ಧಾರ್ಥ್, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ, ಬಿ.ಆರ್. ಶರತ್ (ವಿಕೆಟ್‌ಕೀಪರ್), ಜೆ. ಸುಚಿತ್, ಪವನ್ ದೇಶಪಾಂಡೆ, ಲಿಯಾನ್ ಖಾನ್,ಮೀರ್ ಕೌನೇನ್ ಅಬ್ಬಾಸ್, ಶರತ್ ಶ್ರೀನಿವಾಸ್.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.