ADVERTISEMENT

ಟಿ20 ಪಂದ್ಯ | ಜೆಮಿಮಾ, ರಾಧಾ ಮಿಂಚು; ಶ್ರೀಲಂಕಾ ಎದುರು ಭಾರತ ಮಹಿಳಾ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 16:13 IST
Last Updated 23 ಜೂನ್ 2022, 16:13 IST
ಜೆಮಿಮಾ ರಾಡ್ರಿಗಸ್
ಜೆಮಿಮಾ ರಾಡ್ರಿಗಸ್   

ದಂಬುಲಾ: ಅಲ್ಪಕಾಲದ ಬಿಡುವಿನ ಬಳಿಕ ತಂಡಕ್ಕೆ ಮರಳಿದ ಜೆಮಿಮಾ ರಾಡ್ರಿಗಸ್‌ ಅವರು ಶ್ರೀಲಂಕಾ ವಿರುದ್ಧದ ಚಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು.

ದಂಬುಲಾದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ 34 ರನ್‌ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 138 ರನ್‌ ಪೇರಿಸಿದರೆ, ಆತಿಥೇಯ ತಂಡ 5 ವಿಕೆಟ್‌ ಕಳೆದುಕೊಂಡು ಗಳಿಸಿದ್ದು 104 ರನ್ ಮಾತ್ರ.

ADVERTISEMENT

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಬಿರುಸಿನ ಆಟವಾಡಿದ ಜೆಮಿಮಾ (ಅಜೇಯ 36, 27 ಎ, 4X3, 6X1) ಮತ್ತು ರಾಧಾ ಯಾದವ್ (22ಕ್ಕೆ 2) ಒಳಗೊಂಡಂತೆ ಪ್ರಭಾವಿ ದಾಳಿ ಸಂಘಟಿಸಿದ ಬೌಲರ್‌ಗಳು ಭಾರತದ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌
ಭಾರತ 138ಕ್ಕೆ 6 (20 ಓವರ್‌):
ಶಫಾಲಿ ವರ್ಮ 31, ಹರ್ಮನ್‌ಪ್ರೀತ್‌ ಕೌರ್‌ 22, ಜೆಮಿಮಾ ರಾಡ್ರಿಗಸ್ ಅಜೇಯ 36, ಪೂಜಾ ವಸ್ತ್ರಕರ್ 14, ದೀಪ್ತಿ ಶರ್ಮಾ ಔಟಾಗದೆ 17, ಇನೊಕ ರಣವೀರ 30ಕ್ಕೆ 3, ಒಶದಿ ರಣಸಿಂಘೆ 22ಕ್ಕೆ 2)

ಶ್ರೀಲಂಕಾ 104ಕ್ಕೆ 5 (20 ಓವರ್‌): ಕವಿಶಾ ದಿಲ್ಹರಿ ಔಟಾಗದೆ 47, ಚಾಮರಿ ಅಟಪಟ್ಟು 16, ರಾಧಾ ಯಾದವ್ 22ಕ್ಕೆ 2, ದೀಪ್ತಿ ಶರ್ಮಾ 9ಕ್ಕೆ 1, ಪೂಜಾ ವಸ್ತ್ರಕರ್ 13ಕ್ಕೆ 1, ಶಫಾಲಿ ವರ್ಮ 10ಕ್ಕೆ 1)

ಫಲಿತಾಂಶ: ಭಾರತಕ್ಕೆ 34 ರನ್‌ ಗೆಲುವು
ಪಂದ್ಯಶ್ರೇಷ್ಠ: ಜೆಮಿಮಾ ರಾಡ್ರಿಗಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.