ADVERTISEMENT

IND vs ENG: ಭಾರತದ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 8:06 IST
Last Updated 26 ಮಾರ್ಚ್ 2021, 8:06 IST
ಟಾಸ್‌ ಸಂದರ್ಭ ಭಾರತದ ನಾಯಕ ವಿರಾಟ್‌ ಕೊಹ್ಲಿ ಮತ್ತು ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌
ಟಾಸ್‌ ಸಂದರ್ಭ ಭಾರತದ ನಾಯಕ ವಿರಾಟ್‌ ಕೊಹ್ಲಿ ಮತ್ತು ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌   

ಪುಣೆ: ಇಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಇಂಗ್ಲೆಂಡ್‌ ತಂಡ ಬೌಲಿಂಗ್‌ ಆಯ್ದುಕೊಂಡಿದೆ.

ಕಳೆದ ಪಂದ್ಯದಲ್ಲಿ 98 ರನ್‌ ಗಳಿಸಿದ್ದ ಶಿಖರ್‌ ಧವನ್‌ ಮತ್ತು ಉಪನಾಯಕ ರೋಹಿತ್‌ ಶರ್ಮಾ ಇನಿಂಗ್ಸ್‌ ಆರಂಭಿಸಿದ್ದಾರೆ.

ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 1-0 ಯಿಂದಮುನ್ನಡೆ ಸಾಧಿಸಿದೆ. ವಿರಾಟ್‌ ಕೊಹ್ಲಿ ಪಡೆ ಮೊದಲ ಪಂದ್ಯವನ್ನು 66 ರನ್‌ಗಳಿಂದ ಗೆದ್ದು ಬೀಗಿತ್ತು. ಆ ಪಂದ್ಯದಲ್ಲೂ ಇಂಗ್ಲೆಂಡ್‌ ಮೊದಲು ಬೌಲಿಂಗ್‌ ಆರಿಸಿಕೊಂಡಿತ್ತು ಎಂಬುದು ಗಮನಿಸಬೇಕಾದ ಅಂಶ.

ADVERTISEMENT

ಟೀಂ ಇಂಡಿಯಾದಲ್ಲಿ ಒಂದು; ಇಂಗ್ಲೆಂಡ್‌ ಪಡೆಯಲ್ಲಿ ಎರಡುಬದಲಾವಣೆ
ಮೊದಲ ಏಕದಿನದ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಶ್ರೇಯಸ್‌ ಅಯ್ಯರ್‌ ಬದಲು ಈ ಪಂದ್ಯದಲ್ಲಿ ರಿಷಭ್‌ ಪಂತ್‌ ಭಾರತ ತಂಡ ಕೂಡಿಕೊಂಡಿದ್ದಾರೆ. ಅಯ್ಯರ್‌ ಬದಲು ಸೂರ್ಯಕುಮಾರ್‌ ಯಾದವ್‌ಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗಿತ್ತು.

ಇಂಗ್ಲೆಂಡ್‌ ಪಾಳಯದಲ್ಲಿಮೂರು ಬದಲಾವಣೆಗಳನ್ನು ಮಾಡಲಾಗಿದೆ. ನಾಯಕ ಎಯಾನ್ ಮಾರ್ಗನ್‌ ಬದಲು ಡೇವಿಡ್‌ ಮಲಾನ್, ಸ್ಯಾಮ್‌ ಬಿಲ್ಲಿಂಗ್ಸ್‌ ಬದಲು ಲಿವಿಂಗ್‌ಸ್ಟೋನ್‌ ಹಾಗೂ ಮಾರ್ಕ್‌ ವುಡ್‌ ಬದಲು ರೀಸ್‌ ಟಾಪ್ಲೆ ಕಣಕ್ಕಿಳಿಯಲಿದ್ದಾರೆ. ಮಾರ್ಗನ್‌ ಬದಲು‌ ಈ ಪಂದ್ಯದಲ್ಲಿ ಜಾಸ್‌ ಬಟ್ಲರ್‌ ತಂಡ ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.