ADVERTISEMENT

U19 Asia Cup: ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2024, 9:25 IST
Last Updated 30 ನವೆಂಬರ್ 2024, 9:25 IST
<div class="paragraphs"><p>(ಚಿತ್ರ ಕೃಪೆ: X<a href="https://x.com/ACCMedia1">@ACCMedia1</a>)</p></div>

(ಚಿತ್ರ ಕೃಪೆ: X@ACCMedia1)

   

ದುಬೈ: ಶಾಹಜೆಬ್ ಖಾನ್ (159; 147ಎ) ಅವರ ಶತಕದ ನೆರವಿನಿಂದ ಪಾಕಿಸ್ತಾನ ತಂಡವು 19 ವರ್ಷದೊಳಗಿನವರ ಏಷ್ಯಾ ಕಪ್ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶನಿವಾರ ಭಾರತ ತಂಡವನ್ನು 43 ರನ್‌ಗಳಿಂದ ಮಣಿಸಿತು.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ದುಕೊಂಡಿತು. ಆರಂಭಿಕ ಆಟಗಾರರಾದ ಉಸ್ಮಾನ್‌ ಖಾನ್‌ (60;94ಎ) ಮತ್ತು ಶಾಹಜೆಬ್‌ ಮೊದಲ ವಿಕೆಟ್‌ಗೆ 160 ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರು.

ADVERTISEMENT

ನಂತರದಲ್ಲಿ ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಶಾಹಜೆಬ್‌ ಜವಾಬ್ದಾರಿಯುತ ಆಟವಾಡಿದರು. ಅವರ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಹಾಗೂ ಐದು ಬೌಂಡರಿಗಳು ಸೇರಿದ್ದವು. ತಂಡವು 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 281 ರನ್‌ ಗಳಿಸಿತು.

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಎದುರಾಳಿ ತಂಡದ ಬೌಲರ್‌ಗಳು ಆರಂಭದಲ್ಲೇ ಪೆಟ್ಟು ನೀಡಿದರು. ಐಪಿಎಲ್‌ ಹರಾಜಿನಲ್ಲಿ ಕೋಟ್ಯಧಿಪತಿ ಎನಿಸಿರುವ ಅತಿ ಕಿರಿಯ ಆಟಗಾರ 13ರ ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಆರಂಭಿಕ ಆಟಗಾರನಾಗಿ ಬಂದು ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು.

ನಿಖಿಲ್‌ ಕುಮಾರ್‌ (67; 77ಎ) ಹೊರತುಪಡಿಸಿ ಉಳಿದವರು ಹೆಚ್ಚಿನ ಪ್ರತಿರೋಧ ತೋರಲಿಲ್ಲ. ತಂಡವು 47.1 ಓವರ್‌ಗಳಲ್ಲಿ 238 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು.

‘ಎ’ ಗುಂಪಿನಲ್ಲಿರುವ ಭಾರತ ಎರಡನೇ ಪಂದ್ಯದಲ್ಲಿ ಜಪಾನ್‌ ತಂಡವನ್ನು ಡಿ.2ರಂದು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 281 (ಶಾಹಜೆಬ್ ಖಾನ್ 159, ಉಸ್ಮಾನ್‌ ಖಾನ್‌ 60, ಸಮರ್ಥ್‌ ನಾಗರಾಜ್‌ 45ಕ್ಕೆ 3, ಆಯುಷ್‌ ಮಾತ್ಹೆ 30ಕ್ಕೆ 2). ಭಾರತ: 47.1 ಓವರ್‌ಗಳಲ್ಲಿ 238 (ನಿಖಿಲ್‌ ಕುಮಾರ್‌ 67, ಅಲಿ ರಜಾ 36ಕ್ಕೆ 3, ಅಬ್ದುಲ್ ಸುಭಾನ್ 46ಕ್ಕೆ 2, ಫಹಮ್ ಉಲ್ ಹಕ್ 41ಕ್ಕೆ 2). ಫಲಿತಾಂಶ: ಪಾಕಿಸ್ತಾನಕ್ಕೆ 43 ರನ್‌ ಜಯ. ಪಂದ್ಯದ ಆಟಗಾರ: ಶಾಹಜೆಬ್ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.