
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿಯ ಖರೀದಿಗೆ ಬಿಡ್ ಸಲ್ಲಿಸುವುದಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ಗುರುವಾರ ತಿಳಿಸಿದ್ದಾರೆ. ಈ ಬೆಳವಣಿಯಿಂದ, ಹಾಲಿ ಚಾಂಪಿಯನ್ ‘ಆರ್‌ಸಿಬಿ’ ಮಾರಾಟದ ಕುರಿತಾದ ಊಹಾಪೋಹಗಳು ಮತ್ತೆ ಗರಿಗೆದರಿವೆ.
‘ಐಪಿಎಲ್‌ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿರುವ ಆರ್‌ಸಿಬಿ ಫ್ರ್ಯಾಂಚೈಸಿಯ ಖರೀದಿಗೆ ಮುಂದಿನ ಕೆಲವು ತಿಂಗಳಲ್ಲಿ ಪ್ರಬಲ ಮತ್ತು ಸ್ಪರ್ಧಾತ್ಮಕ ಬಿಡ್ ಸಲ್ಲಿಸಲಿದ್ದೇನೆ’ ಎಂದು ಪೂನಾವಾಲಾ ಅವರು ‘ಎಕ್ಸ್’ನಲ್ಲಿ ಬುಧವಾರ ಬರೆದುಕೊಂಡಿದ್ದಾರೆ.
ಆದರೆ, ಫ್ರ್ಯಾಂಚೈಸಿ ಮಾರಾಟದ ಬಗ್ಗೆ ಆರ್‌ಸಿಬಿ ಆಡಳಿತ ಮಂಡಳಿ ಈವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಬಿಡ್ ಯಾವಾಗ ನಡೆಯಲಿದೆ, ಎಷ್ಟು ಮೊತ್ತಕ್ಕೆ ಬಿಡ್ ಸಲ್ಲಿಸಲಾಗುವುದು ಎಂಬ ಮಾಹಿತಿಯನ್ನೂ ಪೂನಾವಾಲಾ ಅವರು ಬಹಿರಂಗಪಡಿಸಿಲ್ಲ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮಾಲೀಕ ವಿಜಯ್ ವಿಜಯ್ ಕಿರಗಂದೂರು ಅವರೂ ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.