ADVERTISEMENT

ಭಾರತದಲ್ಲಿ ಅಫ್ಗಾನ್‌–ವಿಂಡೀಸ್‌ ಸರಣಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 18:34 IST
Last Updated 7 ಜುಲೈ 2019, 18:34 IST

ನವದೆಹಲಿ: ಅಫ್ಗಾನಿಸ್ತಾನ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಕ್ರಿಕೆಟ್‌ ಸರಣಿಯು ಈ ವರ್ಷದ ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ.

‘ಫ್ಯೂಚರ್ ಟೂರ್ಸ್‌ ಪ್ರೋಗ್ರಾಮ್‌ (ಎಫ್‌ಟಿಪಿ) ಅನ್ವಯ ಅಫ್ಗಾನಿಸ್ತಾನ ನವೆಂಬರ್‌ 5 ರಿಂದ ಡಿಸೆಂಬರ್‌ 1ರ ಅವಧಿಯಲ್ಲಿ ವಿಂಡೀಸ್‌ ಎದುರು ಏಕದಿನ, ಟ್ವೆಂಟಿ (ತಲಾ ಮೂರು ಪಂದ್ಯ) ಹಾಗೂ ಟೆಸ್ಟ್‌ (ಒಂದು ಪಂದ್ಯ) ಸರಣಿಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳೂ ಭಾರತದಲ್ಲೇ ನಡೆಯಲಿವೆ. ಕ್ರೀಡಾಂಗಣಗಳನ್ನು ಶೀಘ್ರವೇ ಅಂತಿಮಗೊಳಿಸುತ್ತೇವೆ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

‘ವಿಂಡೀಸ್‌ ಸರಣಿಗೂ ಮುನ್ನ ಅಫ್ಗಾನ್‌ ತಂಡವು ಬಾಂಗ್ಲಾದೇಶ ಎದುರು ಏಕೈಕ ಟೆಸ್ಟ್‌ (ಸೆಪ್ಟೆಂಬರ್‌ನಲ್ಲಿ) ಆಡಲಿದೆ. ನಂತರ ತ್ರಿಕೋನ ಟ್ವೆಂಟಿ–20 ಸರಣಿ ನಡೆಯಲಿದೆ. ಇದರಲ್ಲಿ ಬಾಂಗ್ಲಾ ಮತ್ತು ಜಿಂಬಾಬ್ವೆ ಭಾಗವಹಿಸಲಿವೆ’ ಎಂದೂ ವಿವರಿಸಲಾಗಿದೆ.

ADVERTISEMENT

ಅಫ್ಗಾನ್‌ ಮತ್ತು ವಿಂಡೀಸ್‌ ಇದುವರೆಗೂ 10 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಕೆರಿಬಿಯನ್‌ ತಂಡವು ಐದರಲ್ಲಿ ಗೆದ್ದಿದೆ.

ಅಫ್ಗಾನಿಸ್ತಾನದಲ್ಲಿ ಸುಸಜ್ಜಿತ ಮೈದಾನ ಮತ್ತು ಮೂಲ ಸೌಕರ್ಯಗಳಿಲ್ಲದ ಕಾರಣ ಆ ತಂಡವು ಮೊದಲಿನಿಂದಲೂ ತನ್ನ ಪಾಲಿನ ಸರಣಿಗಳನ್ನು ಭಾರತದಲ್ಲಿ ಆಡುತ್ತಿದೆ.

ವೇಳಾಪಟ್ಟಿ
*ನವೆಂಬರ್‌ 5 | ಮೊದಲ ಟ್ವೆಂಟಿ–20
*ನವೆಂಬರ್‌ 7 | ಎರಡನೇ ಟ್ವೆಂಟಿ–20
*ನವೆಂಬರ್‌ 9 | ಮೂರನೇ ಟ್ವೆಂಟಿ–20
*ನವೆಂಬರ್‌ 13 | ಮೊದಲ ಏಕದಿನ
*ನವೆಂಬರ್‌ 16 | ಎರಡನೇ ಏಕದಿನ
*ನವೆಂಬರ್‌ 18 | ಮೂರನೇ ಏಕದಿನ
*ನವೆಂಬರ್‌ 27–ಡಿಸೆಂಬರ್‌ 1 | ಏಕೈಕ ಟೆಸ್ಟ್‌

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.