ಮೊಹಮ್ಮದ್ ನಬಿ
ಅಹಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಪಂದ್ಯದ ವೇಳೆ ಅಂಪೈರ್ ನಿರ್ಧಾರ ಪ್ರಶ್ನಿಸಿದ ಅಫ್ಗಾನಿಸ್ತಾನದ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರಿಗೆ ಪಂದ್ಯ ಸಂಭಾವನೆಯ ಶೇ 15ರಷ್ಟು ಮೊತ್ತವನ್ನು ದಂಡವನ್ನಾಗಿ ವಿಧಿಸಲಾಗಿದೆ.
ಬುಧವಾರ ನಡೆದ ಈ ಅಫ್ಗಾನಿಸ್ತಾನ ಇನಿಂಗ್ಸ್‌ನ 14ನೇ ಓವರ್ ಆರಂಭದಲ್ಲಿ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಅವರ ರಿಸ್ಟ್ ಬ್ಯಾಂಡ್‌ಗೆ ಸಂಬಂಧಿಸಿದಂತೆ ನಬಿ ಅವರು ಅಂಪೈರ್ ಜೊತೆ ಕೆಲಹೊತ್ತು ವಾಗ್ವಾದ ನಡೆಸಿದ್ದರು.
‘ನಬಿ ಅವರು ಐಸಿಸಿ ಶಿಸ್ತುಸಂಹಿತೆಯ 2.4ನೇ ವಿಧಿ ಉಲ್ಲಂಘಿಸಿದ್ದು ಸಾಬೀತಾಗಿದೆ. ಇದು ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ಸೂಚನೆಗೆ ಅವಿಧೇಯತೆ ಪ್ರದರ್ಶನಕ್ಕೆ ಸಂಬಂಧಿಸಿದೆ’ ಎಂದು ಐಸಿಸಿ ಹೇಳಿಕೆ ತಿಳಿಸಿದೆ.
ದಂಡದ ಜೊತೆಗೆ ನಬಿ ಅವರಿಗೆ ಶಿಸ್ತುದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸಹ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.