ADVERTISEMENT

ತವರಿನ ಟೆಸ್ಟ್, ಏಕದಿನ, ಟಿ–20 ಸರಣಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಪಿಟಿಐ
Published 2 ಏಪ್ರಿಲ್ 2025, 14:09 IST
Last Updated 2 ಏಪ್ರಿಲ್ 2025, 14:09 IST
<div class="paragraphs"><p>ಬಿಸಿಸಿಐ&nbsp;</p></div>

ಬಿಸಿಸಿಐ 

   

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಬುಧವಾರ ಮುಂಬರುವ 2025-26ರ ಋತುವಿನ ಭಾರತ ಕ್ರಿಕೆಟ್ ತಂಡದ ತವರು ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದು 2025ರ ಅಕ್ಟೋಬರ್‌ನಿಂದ ಆರಂಭವಾಗಲಿದೆ.

2025ರ ತವರು ಋತುವಿನಲ್ಲಿ ಭಾರತ ತಂಡ ನಾಲ್ಕು ಟೆಸ್ಟ್ ಪಂದ್ಯಗಳನ್ನು ಅಹಮದಾಬಾದ್, ಕೋಲ್ಕತ್ತ, ನವದೆಹಲಿ ಮತ್ತು ಗುವಾಹಟಿಯಲ್ಲಿ ಆಡಲಿದೆ..

ADVERTISEMENT

ಅಕ್ಟೋಬರ್ 6ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳನ್ನು ಭಾರತ ಅಹಮದಾಬಾದ್ ಮತ್ತು ಕೋಲ್ಕತ್ತದಲ್ಲಿ ಆಡಲಿದೆ.

ನವೆಂಬರ್ 18ರಿಂದ ಭಾರತ ಕ್ರಮವಾಗಿ ನವದೆಹಲಿ ಮತ್ತು ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಇದಾಗಲಿದೆ.

ಟೆಸ್ಟ್ ಪಂದ್ಯಗಳ ಜೊತೆಗೆ, ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.

ವೇಳಾಪಟ್ಟಿ

ವೆಸ್ಟ್ ಇಂಡೀಸ್ ಭಾರತ ಪ್ರವಾಸ:

* ಅಕ್ಟೋಬರ್ 6ರಿಂದ ಅಹಮದಾಬಾದ್‌ನಲ್ಲಿ ಮೊದಲ ಟೆಸ್ಟ್.

* ಅಕ್ಟೋಬರ್ 14ರಿಂದ ಕೋಲ್ಕತ್ತದಲ್ಲಿ ಎರಡನೇ ಟೆಸ್ಟ್.

ದಕ್ಷಿಣ ಆಫ್ರಿಕಾ ಭಾರತ ಪ್ರವಾಸ:

* ನವೆಂಬರ್ 18ರಿಂದ ನವದೆಹಲಿಯಲ್ಲಿ ಮೊದಲ ಟೆಸ್ಟ್.

* ನವೆಂಬರ್ 26ರಿಂದ ಗುವಾಹಟಿಯಲ್ಲಿ ಎರಡನೇ ಟೆಸ್ಟ್.

* ನವೆಂಬರ್ 30ರಂದು ರಾಂಚಿಯಲ್ಲಿ ಮೊದಲ ಏಕದಿನ ಪಂದ್ಯ.

* ಡಿಸೆಂಬರ್ 3ರಂದು ರಾಯ್ಪುರದಲ್ಲಿ ಎರಡನೇ ಏಕದಿನ ಪಂದ್ಯ.

* ಡಿಸೆಂಬರ್ 6ರಂದು ವಿಶಾಖಪಟ್ಟಣದಲ್ಲಿ ಮೂರನೇ ಏಕದಿನ ಪಂದ್ಯ.

* ಡಿಸೆಂಬರ್ 9ರಂದು ಕಟಕ್‌ನಲ್ಲಿ ಮೊದಲ ಟಿ20 ಪಂದ್ಯ.

* ಡಿಸೆಂಬರ್ 11ರಂದು ಚಂಡೀಗಢದಲ್ಲಿ ಎರಡನೇ ಟಿ20 ಪಂದ್ಯ.

* ಡಿಸೆಂಬರ್ 14ರಂದು ಧರ್ಮಶಾಲಾದಲ್ಲಿ ಮೂರನೇ ಟಿ20 ಪಂದ್ಯ..

* ಡಿಸೆಂಬರ್ 17ರಂದು ಲಖನೌದಲ್ಲಿ ನಾಲ್ಕನೇ ಟಿ20 ಪಂದ್ಯ.

* ಡಿಸೆಂಬರ್ 19ರಂದು ಅಹಮದಾಬಾದ್‌ನಲ್ಲಿ ಐದನೇ ಟಿ20 ಪಂದ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.